Asianet Suvarna News Asianet Suvarna News

ತೆಲಂಗಾಣ ಸಿಎಂ ಬಗ್ಗೆ ಇಂಟರೆಸ್ಟಿಂಗ್ ವಿಚಾರವಿದು!

ತೆಲಂಗಾಣದಲ್ಲಿ ಇದೇ ಡಿಸೆಂಬರ್ 7 ರಂದು ಚುನಾವಣೆ ನಡೆಯುತ್ತಿದ್ದು, ಪಕ್ಷಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ವಿವಿಧ ಅಭ್ಯರ್ಥಿಗಳು ತಮ್ಮ ಆಸ್ತಿ ಪಾಸ್ತಿ ವಿವರವನ್ನು ಸಲ್ಲಿಕೆ ಮಾಡುತ್ತಿದ್ದು, ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ 20 ಕೋಟಿ ಒಡೆಯನಾದರೂ ಕೂಡ ಅವರ ಬಳಿ ಸ್ವಂತ ಕಾರಿಲ್ಲ ಎನ್ನುವ ವಿಚಾರ ಬಹಿರಂಗವಾಗಿದೆ. 

Agriculturist KCR Has Rs 22 Crores Has No Car
Author
Bengaluru, First Published Nov 15, 2018, 2:16 PM IST

ಹೈದ್ರಾಬಾದ್ :  ತೆಲಂಗಾಣದಲ್ಲಿ ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ವಿವಿಧ ಪಕ್ಷಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಇದೇ ವೇಳೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದು, ತಮ್ಮ ಆಸ್ತಿ ಪಾಸ್ತಿ ವಿವರನ್ನು ಬಹಿರಂಗ ಮಾಡುತ್ತಿದ್ದಾರೆ. 

ಇನ್ನು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಗಜ್ವೆಲ್ ಕ್ಷೇತ್ರದಿಂದ ಚುನಾವಣೆ ಸ್ಪರ್ಧೆ ಮಾಡುತ್ತಿದ್ದು, ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿ ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದಾರೆ. 

ಈ ವೇಳೆ ಅವರ ಆಸ್ತಿ ವಿವರ ಬಹಿರಂಗಗೊಂಡಿದೆ. ಒಟ್ಟು 22 ಕೋಟಿ ಒಡೆಯನಾಗಿರುವ ಅವರ ಬಳಿ ಸ್ವಂತ ಕಾರು ಇಲ್ಲಂತೆ. ತಮ್ಮ ಬಳಿಕ 22.61 ಕೋಟಿ ಮೌಲ್ಯದ ಆಸ್ತಿ ಇದ್ದು,  54 ಎಕರೆಯಷ್ಟು ಕೃಷಿ ಭೂಮಿ ಇದೆ ಎಂದು ತಿಳಿಸಿದ್ದಾರೆ. ಕೆಸಿಆರ್ ಅವರ ಆಸ್ತಿಯಲ್ಲಿ 2014ರಿಂದ ಇಲ್ಲಿಯವರೆಗೆ ಒಟ್ಟು 7 ಕೋಟಿಯಷ್ಟು ಏರಿಕೆಯಾಗಿದೆ. 

ಇನ್ನು ಚಂದ್ರಶೇಖರ್ ರಾವ್ ಪತ್ನಿ ಶೋಭಾ ಬಳಿ ಒಟ್ಟು 94.5 ಎಕರೆಯಷ್ಟು ಚರಾಸ್ಥಿ ಇದೆ.  ಇನ್ನು ವರ್ಷಕ್ಕೆ ಕೃಷಿ ಭೂಮಿಯಿಂದ 91 ಲಕ್ಷ ಆದಾಯ ಇರುವುದಾಗಿ ತಮ್ಮ ಆಸ್ತಿ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. 

Follow Us:
Download App:
  • android
  • ios