ಕಾನೂನಿನ ಬಗ್ಗೆ ನನಗೆ ತುಂಬಾ ಚೆನ್ನಾಗಿ ಗೊತ್ತಿದೆ. ನಾಳೆ ಪತ್ರಿಕಾ ಪ್ರಕಟಣೆ ಕರೆದು ಇನ್ನಷ್ಟು ಮಾಹಿತಿ ನೀಡುತ್ತೇನೆಂದು ಶ್ರೀಧರ್ ಹೇಳಿದ್ದಾರೆ.

ಬೆಂಗಳೂರು(ಫೆ.11): ರೌಡಿಗಳಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದ ಆರೋಪದಡಿ ಬಂಧನದ ಭೀತಿಯಲ್ಲಿದ್ದ ಅಗ್ನಿ ಶ್ರೀಧರ್'ಗೆ ನಿರೀಕ್ಷಣಾ ಜಾಮೀನು ಸಿಕ್ಕಿದ ಬೆನ್ನಲ್ಲೆ ಮಾದ್ಯಮಗಳ ಮೇಲೆ ಹರಿಹಾಯ್ದಿದ್ದಾರೆ.

ಸಾಗರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಮಾದ್ಯಮದವರ ಕ್ಯಾಮರಾ ಕಂಡು ಅವರ ಮೇಲೆ ಕಿಡಿಕಾರಿದ ಶ್ರೀಧರ್, ನೀವು ನನ್ನನ್ನು ರಾಜಕಾರಣಿ ಅಂದುಕೊಂಡಿದ್ದೀರಾ? ಇಷ್ಟು ದಿನ ನಾನು ಸಣ್ಣ ದೀಪವಾಗಿದ್ದೆ, ಆದರೆ ನೀವೆಲ್ಲಾ ಸೇರಿ ನನ್ನನ್ನು ಜ್ವಾಲೆ ಮಾಡಿ ಬಿಟ್ರಿ. ನನಗೆ ನಾಟಕವಾಡುವ ಅವಶ್ಯಕತೆಯೂ ಇಲ್ಲ ಎಂದರು.

ಇನ್ನೂ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಿತ್ತು. ಮಾದ್ಯಮಗಳಲ್ಲಿ ತೋರಿಸಿದ ವರದಿಗಳನ್ನು ನೋಡಿ ಮೂರು ದಿನಗಳಿಂದ ನಿದ್ದೆ ಮಾಡಿಲ್ಲ. ಹುಚ್ಚನಾಗಿದ್ದೇನೆ. ಇದನ್ನೆಲ್ಲಾ ನೋಡಿ ಇಂದೇ ಡಿಸ್ಚಾರ್ಜ್ ಆಗಿದ್ದೇನೆ. ನೀವೆಲ್ಲಾ ನನ್ನನ್ನು ಸತ್ತೇ ಹೋಗಿದ್ದಾನೆ ಎಂದು ತೋರಿಸಿದ್ದೀರ. ಆದರೆ ನಾನಿನ್ನು ಬದುಕಿದ್ದೇನೆ, ಸತ್ತಿಲ್ಲ ಎಂದು ಶ್ರೀಧರ್ ಕಿಡಿಕಾರಿದ್ದಾರೆ.

ಕಾನೂನಿನ ಬಗ್ಗೆ ನನಗೆ ತುಂಬಾ ಚೆನ್ನಾಗಿ ಗೊತ್ತಿದೆ. ನಾಳೆ ಪತ್ರಿಕಾ ಪ್ರಕಟಣೆ ಕರೆದು ಇನ್ನಷ್ಟು ಮಾಹಿತಿ ನೀಡುತ್ತೇನೆಂದು ಶ್ರೀಧರ್ ಹೇಳಿದ್ದಾರೆ.