ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ ಅಲಿಯಾಸ್ ಕಡಬಗೆರೆ ಸೀನನ ಮೇಲಿನ ಶೂಟೌಟ್ ಪ್ರಕರಣದ ತನಿಖೆ ಚುರುಕು ಗೊಂಡಿದೆ. ಪತ್ರಕರ್ತ, ಮಾಜಿ ಡಾನ್, ಮಾಜಿ ರೌಡಿ ಶೀಟರ್ ಅಗ್ನಿ ಶ್ರೀಧರ್ ಹಲ್ಲೆ ಪ್ರಕರಣ ಸಂಬಂಧ ಶಂಕಿತ ಆರೋಪಿಗಳಿಗೆ ಆಶ್ರಯ ನೀಡಿದ್ದಾರೆಂಬ ಗುಮಾನಿ ಪೊಲೀಸರಿಗೆ ಇತ್ತು.. ಹೀಗಾಗಿ ನಿನ್ನೆ ಕುಮಾರಸ್ವಾಮಿ ಲೇಔಟ್ನಲ್ಲಿರುವ ಅಗ್ನಿ ಶ್ರೀಧರ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದರು. ಆಗ ಬೆಚ್ಚಿಬೀಳುವ ಸರದಿ ಪೊಲೀಸರದ್ದು.
ಬೆಂಗಳೂರು(ಫೆ.08): ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ ಅಲಿಯಾಸ್ ಕಡಬಗೆರೆ ಸೀನನ ಮೇಲಿನ ಶೂಟೌಟ್ ಪ್ರಕರಣದ ತನಿಖೆ ಚುರುಕು ಗೊಂಡಿದೆ. ಪತ್ರಕರ್ತ, ಮಾಜಿ ಡಾನ್, ಮಾಜಿ ರೌಡಿ ಶೀಟರ್ ಅಗ್ನಿ ಶ್ರೀಧರ್ ಹಲ್ಲೆ ಪ್ರಕರಣ ಸಂಬಂಧ ಶಂಕಿತ ಆರೋಪಿಗಳಿಗೆ ಆಶ್ರಯ ನೀಡಿದ್ದಾರೆಂಬ ಗುಮಾನಿ ಪೊಲೀಸರಿಗೆ ಇತ್ತು.. ಹೀಗಾಗಿ ನಿನ್ನೆ ಕುಮಾರಸ್ವಾಮಿ ಲೇಔಟ್ನಲ್ಲಿರುವ ಅಗ್ನಿ ಶ್ರೀಧರ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದರು. ಆಗ ಬೆಚ್ಚಿಬೀಳುವ ಸರದಿ ಪೊಲೀಸರದ್ದು.
ಅಗ್ನಿ ಮನೆಯಲ್ಲಿ ಸಿಕ್ಕಿದ್ದೇನು..?
-ಅಗ್ನಿಶ್ರೀಧರ್ ಮನೆಯಲ್ಲಿ ರಿವಾಲ್ವರ್, ಕತ್ತಿ, ಬುಲೆಟ್'ಗಳ ರಾಶಿ
-ಸುಮಾರು 7 ಲಕ್ಷ ನಗದು ಹಾಗೂ 400 ಗ್ರಾಂ ಚಿನ್ನ
-ಶ್ರೀಧರ್ ಬಲಗೈ ಭಂಟ ಬಚ್ಚನ್ ಮನೆಯಲ್ಲಿ ಮಾರಕಾಸ್ತ್ರಗಳು
-4 ರಿವಾಲ್ವೡ, 24 ರೌಂಡ್ ಬುಲೆಟ್, 2 ಲಾಂಗು
-2 ಬಟನ್ ಚಾಕು, 4 ಬೇಸ್ಬಾಲ್ ಬ್ಯಾಟ್, 3 ಡ್ರ್ಯಾಗರ್
-2 ಪೋಕರ್ ಚಾಕು, ಎರಡು ಕತ್ತಿ, ಅಕ್ರಮ ಗಾಂಜಾ
-6 ಲಕ್ಷ 88 ಸಾವಿರ ನಗದು, 418 ಗ್ರಾಂ ಚಿನ್ನ
ಅಗ್ನಿಶ್ರಿಧರ್ ಆಪ್ತ ಬಚ್ಚನ್ ಸೇರಿ 8 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಇನ್ನೂ ವಿಚಾರಣೆ ವೇಳೆ ಅಗ್ನಿ ಶ್ರೀಧರ್ ಪೊಲೀಸರ ಎದುರು ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಇದರಿಂದ ಲಘು ಹೃದಯಾಘಾತವಾಗಿ ಸಾಗರ್ ಆಸ್ಪತ್ರೆಗೆ ಸೇರಿಸಲಾಗಿದೆ.
ಸೀನನ ಹತ್ಯೆಗೆ ಪ್ರಭಾವಿ ಶಾಸಕನೊಬ್ಬ ಒಂದು ಕೋಟಿ ರೂಪಾಯಿಗೆ ರೋಹಿತ್ ಅಲಿಯಾಸ್ ಒಂಟೆಗೆ ಸುಪಾರಿ ನೀಡಿದ್ದ ಎನ್ನಲಾುತ್ತಿದ್ದು, ಇನ್ನೂ ಕಡಬಗೆರೆ ಸೀನನ ಮೇಲಿನ ಗುಂಡಿನ ದಾಳಿ ಬಳಿಕ ರೋಹಿತ್ ನಾಪತ್ತೆಯಾಗಿದ್ದ. ಶ್ರೀಧರ್ ಮನೆಯಲ್ಲೇ ರೋಹಿತ್ ಅಡಗಿರುವ ಶಂಕೆಯಿಂದ ಪೊಲೀಸರು ದಾಳಿ ನಡೆಸಿದಾಗ.. ಮಾಜಿ ಡಾನ್, ಹಾಲಿ ಪತ್ರಕರ್ತ ಶ್ರೀಧರ್ ನಿಜ ಬಣ್ಣ ಬಯಲಾಗಿದೆ. ಸದ್ಯ ಜೈಲುವಾಸ ತಪ್ಪಸಿಕೊಳ್ಳಲು ಶ್ರೀಧರ್ ಆಸ್ಪತ್ರೆ ಸೇರಿದ್ದಾನೆ.
