Asianet Suvarna News Asianet Suvarna News

ಏಷ್ಯಾ ಮೂಲೆಮೂಲೆಯನ್ನೂ ತಲುಪಬಲ್ಲ ಅಗ್ನಿ-5 ಕ್ಷಿಪಣಿಯ ಅಂತಿಮ ಪರೀಕ್ಷೆ ಯಶಸ್ವಿ

ಈ ಕ್ಷಿಪಣಿಯು 5 ಸಾವಿರಕ್ಕೂ ಹೆಚ್ಚು ದೂರದ ಸ್ಥಳಗಳಲ್ಲಿರುವ ಗುರಿಯನ್ನು ತಲುಪಬಲ್ಲುದು. ಚೀನಾ ಮಾತ್ರವಲ್ಲ ಏಷ್ಯಾ ಖಂಡದ ಯಾವುದೇ ದೇಶಗಳನ್ನು ಇದು ಟಾರ್ಗೆಟ್ ಮಾಡಬಲ್ಲುದು. ಅಷ್ಟೇ ಅಲ್ಲ, ಆಫ್ರಿಕಾ ಮತ್ತು ಯೂರೋಪ್ ಖಂಡದ ಕೆಲ ದೇಶಗಳಿಗೂ ಇದು ನುಗ್ಗಬಲ್ಲುದು.

agni 5 missile successfully test fired for the last time

ನವದೆಹಲಿ(ಡಿ. 26): ದೇಶೀ ನಿರ್ಮಿತ ಅಗ್ನಿ-5 ಖಂಡಾಂತರ ಕ್ಷಿಪಣಿಯ ನಾಲ್ಕನೇ ಪ್ರಾಯೋಗಿಕ ಉಡಾವಣೆ ಪರೀಕ್ಷೆ ಯಶಸ್ವಿಯಾಗಿದೆ. ಒಡಿಶಾದ ಬಲಾಸೋರ್ ಜಿಲ್ಲೆಯಲ್ಲಿರುವ ಅಬ್ದುಲ್ ಕಲಾಂ ದ್ವೀಪದಿಂದ ಇಂದು ಸೋಮವಾರ ಬೆಳಗ್ಗೆ 11:05ರ ಸಮಯದಲ್ಲಿ ಕ್ಷಿಪಣಿಯ ಉಡಾವಣೆ ಪ್ರಯೋಗ ನಡೆಸಲಾಯಿತು. ಇಂದು ಈ ಕ್ಷಿಪಣಿಯ ಅಂತಿಮ ಪರೀಕ್ಷೆಯಾಗಿದೆ. ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಈ ಕ್ಷಿಪಣಿ ಇದೀಗ ಸೇನೆಯ ನಿಯೋಜನೆಗೆ ಸಂಪೂರ್ಣ ಸಿದ್ಧವಾಗಿದೆ ಎನ್ನಲಾಗಿದೆ.

ಕ್ಷಿಪಣಿಯ ವಿಶೇಷತೆಗಳು ಏನು?
* ನೆಲದಿಂದ ನೆಲಕ್ಕೆ ಚಿಮ್ಮುವ ಖಂಡಾಂತರ ಕ್ಷಿಪಣಿಯಾದ ಅಗ್ನಿ-5 ವಿಶ್ವದ ಅತ್ಯಂತ ಪ್ರಬಲ ಕ್ಷಿಪಣಿಗಳಲ್ಲೊಂದೆನಿಸಿದೆ. ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳಲ್ಲಿ ಮಾತ್ರ ಇಂಥ ಅತ್ಯಾಧುನಿಕ ಕ್ಷಿಪಣಿಗಳಿವೆ.

* ಈ ಕ್ಷಿಪಣಿಯು 5 ಸಾವಿರಕ್ಕೂ ಹೆಚ್ಚು ದೂರದ ಸ್ಥಳಗಳಲ್ಲಿರುವ ಗುರಿಯನ್ನು ತಲುಪಬಲ್ಲುದು. ಚೀನಾ ಮಾತ್ರವಲ್ಲ ಏಷ್ಯಾ ಖಂಡದ ಯಾವುದೇ ದೇಶಗಳನ್ನು ಇದು ಟಾರ್ಗೆಟ್ ಮಾಡಬಲ್ಲುದು. ಅಷ್ಟೇ ಅಲ್ಲ, ಆಫ್ರಿಕಾ ಮತ್ತು ಯೂರೋಪ್ ಖಂಡದ ಕೆಲ ದೇಶಗಳಿಗೂ ಇದು ನುಗ್ಗಬಲ್ಲುದು.

* 17 ಮೀಟರ್ ಉದ್ದ, 2 ಮೀಟರ್ ಅಗಲ, 50 ಟನ್ ತೂಕ ಇರುವ ಈ ಕ್ಷಿಪಣಿಯು 1 ಟನ್'ನಷ್ಟು ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲುದು.

* ರೆಡ್ಯೂಂಡೆಂಟ್ ನ್ಯಾವಿಗೇಷನ್ ಸಿಸ್ಟಮ್, ರಿಂಗ್ ಲೇಸರ್ ಆಧಾರಿತ ಇನರ್ಷಿಯಲ್ ನ್ಯಾವಿಗೇಶನ್ ಸಿಸ್ಟಮ್(ಆರ್'ಐಎನ್'ಎಸ್), ಮೈಕ್ರೋ ನ್ಯಾವಿಗೇಶನ್ ಸಿಸ್ಟಮ್(ಎಂಐಎನ್'ಎಸ್), ಹೈಸ್ಪೀಡ್ ಆನ್'ಬೋರ್ಡ್ ಕಂಪ್ಯೂಟರ್, ಫಾಲ್ಟ್ ಟಾಲರೆಂಟ್ ಸಾಫ್ಟ್'ವೇರ್ ಮೊದಲಾದ ಅತ್ಯಾಧುನಿಕ ತಂತ್ರಜ್ಞಾನಗಳು ಈ ಕ್ಷಿಪಣಿಯಲ್ಲಿ ಅಡಕವಾಗಿವೆ.

* ಸರಕಾರಿ ಸ್ವಾಮ್ಯದ ಡಿಆರ್'ಡಿಓ ಸಂಸ್ಥೆಯು ಅಗ್ನಿ ಸರಣಿಯ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದೆ. ಅಗ್ನಿ-5 ಕ್ಷಿಪಣಿಯ ಮೊದಲ ಪ್ರಯೋಗ 2012ರ ಏಪ್ರಿಲ್ 19ರಂದು ನಡೆದಿತ್ತು. ಇವತ್ತು ನಡೆದದ್ದು ನಾಲ್ಕನೇ ಪರೀಕ್ಷೆಯಾಗಿದೆ.

ಅಗ್ನಿ-6 ಯೋಜನೆ:
ಇನ್ನು, ಅಗ್ನಿ-6 ಕ್ಷಿಪಣಿಯ ನೀಲನಕಾಶೆ ತಲುಪಿದ್ದು, ಸರಕಾರ ಈಗ ಓಕೆ ಎಂದರೆ ಮುಂದಿನ ವರ್ಷ ಪರೀಕ್ಷೆಗೆ ಸಿದ್ಧವಾಗಲಿದೆ. ಇದು 8-12 ಸಾವಿರ ಕಿಮೀ ದೂರದ ಟಾರ್ಗೆಟ್'ಗಳನ್ನು ಮುಟ್ಟಬಲ್ಲ ಸಾಮರ್ಥ್ಯ ಹೊಂದಿರಲಿದೆ. ಅಗ್ನಿ ಸರಣಿಯ ಕ್ಷಿಪಣಿಗಳಲ್ಲೇ ಅಗ್ನಿ-6 ಅತ್ಯಂತ ಶಕ್ತಿಯುತವೆನ್ನಲಾಗಿದೆ. ಡಿಆರ್'ಡಿಓ ಸಂಸ್ಥೆಯೇ ಇದರ ತಯಾರಿಕೆ ಮಾಡಲಿದೆ. ಇದು ಬಂದರೆ, ನಾವು ಅಮೆರಿಕವನ್ನೂ ಟಾರ್ಗೆಟ್ ಮಾಡಬಹುದಾಗಿದೆ.

Follow Us:
Download App:
  • android
  • ios