ಕೇಂದ್ರ ಸರ್ಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಶುಕ್ರವಾರವಷ್ಟೇ 2.50 ರು. ಇಳಿಕೆ ಮಾಡಿತ್ತು. ಆದರೂ ಕೂಡ ದಿನದಿಂದ ದಿನಕ್ಕೆ ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಲೇ ಸಾಗಿದೆ.  

ನವದೆಹಲಿ: ಗ್ರಾಹಕರ ಮೇಲಿನ ಹೊರೆ ಇಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಶುಕ್ರವಾರವಷ್ಟೇ 2.50 ರು. ಇಳಿಕೆ ಮಾಡಿತ್ತು.

 ಆದರೆ, ಇದಾದ ಮಾರನೇ ದಿನವೇ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ಪರ್ವ ಆರಂಭವಾಗಿದೆ. ಅಂದರೆ, ಶನಿವಾರವೇ ಲೀ. ಪೆಟ್ರೋಲ್‌ ಬೆಲೆಯು 18 ಪೈಸೆ ಏರಿಕೆಯಾಗಿದೆ. 

ಅಲ್ಲದೆ, ಭಾನುವಾರವೂ ಪೆಟ್ರೋಲ್‌ ದರವು 14 ಪೈಸೆ ಏರಿಕೆಯಾಗಿದೆ. ಅದೇ ರೀತಿ ಡೀಸೆಲ್‌ ದರವೂ 2 ದಿನದಲ್ಲಿ ಒಟ್ಟಾರೆ 58 ಪೈಸೆ ಏರಿಕೆಯಾಗಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತಿಳಿಸಿವೆ. ಕರ್ನಾಟಕದಲ್ಲಿ ಪೆಟ್ರೋಲ್‌ ದರ 82.46 ರು. ಹಾಗೂ ಡೀಸೆಲ್‌ಗೆ 73.90 ರು.ಗೆ ಏರಿಕೆಯಾಗಿದೆ.