ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಬಿಗ್ ರಿಲೀಫ್ ಸಿಕ್ಕಿದೆ. ಎಸಿಬಿ ಎಫ್ಐಆರ್ ಕಾನೂನು ಪಾಲಿಸಿಲ್ಲ ಎಂಬ ಅಭಿಪ್ರಾಯಕ್ಕೆ ಬಂದ ಹೈಕೋರ್ಟ್ ಬಿಎಸ್ವೈ ವಿರುದ್ಧ ಎರಡೂ ಎಫ್ಐಆರ್ಗೂ ಮಧ್ಯಂತರ ತಡೆ ನೀಡಿದೆ.
ಬೆಂಗಳೂರು(ಸೆ.22): ಡಿನೋಟಿಫಿಕೇಶನ್ ಕೇಸ್ ರಿಲೀಫ್ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಕಿಡ್ನಾಪ್ ಕೇಸ್ ಬಿಸಿತಟ್ಟಿದೆ.
ಈಶ್ವರಪ್ಪ ಪಿಎ ವಿನಯ್ ಕಿಡ್ನಾಪ್ ಪ್ರಕರಣದಲ್ಲಿ ಬಿಎಸ್ವೈಗೆ ನೋಟಿಸ್' ನೀಡಲಾಗಿದೆ. ಬಿಎಸ್'ವೈ ಪಿಎ ಸಂತೋಷ್ ವಿರುದ್ಧ ಕಿಡ್ನಾಪ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಲ್ಲೇಶ್ವರಂ ವಿಭಾಗದ ಸಹಾಯಕ ಆಯುಕ್ತರಿಂದ ನೋಟಿಸ್'ನೀಡಲಾಗಿದೆ. ಸೆ.28 ರಂದು ಗುರುವಾರ ವಿಚಾರಣೆಗೆ ಹಾಜರಾಗುವಂತೆ ಬಿಎಸ್ವೈಗೆ ತಿಳಿಸಲಾಗಿದೆ.ವಿನಯ್ ಕೇಸ್ನ ವಿಚಾರಣೆ ವೇಳೆಯಲ್ಲಿ ಕಿಡ್ನಾಪ್ ಸಂಚಿನ ಬಗ್ಗೆ ಆರೋಪಿಗಳು ಬಾಯಿಬಿಟ್ಟಿದ್ದರು.