ಚೇತರಿಸಿಕೊಳ್ಳುತ್ತಿರುವ ಕೊಡಗಲ್ಲಿ ಮತ್ತೆ ಆತಂಕ

ಪ್ರವಾಹದಿಂದ ಚೇತರಿಸಿಕೊಳ್ಳುತ್ತಿರುವ ಕೊಡಗಲ್ಲಿ ಇದೀಗ ಮತ್ತೆ ಆತಂಕ ಸೃಷ್ಟಿಯಾಗಿದೆ. ಭೂಮಿಯೊಳಘೆ ಇಲ್ಲಿ ರಾತ್ರಿಪೂರ್ತಿ ಸದ್ದು ಕೇಳಿಸಿದೆ.  ಕರಿಕೆ ಗ್ರಾಮದ ಚೆತ್ತುಕಾಯ ಪ್ರದೇಶದಲ್ಲಿ ಭೂಮಿಯೊಳಗೆ ಸೋಮವಾರ ಭಾರಿ ಶಬ್ದ ಕೇಳಿಸಿದ್ದು ಆತಂಕ ಮೂಡಿಸಿದೆ. 

Again Kodagu People Hearing Sound From Inside Earth

ಮಡಿಕೇರಿ: ಭಾರೀ ಪ್ರಾಕೃತಿಕ ವಿಕೋಪ, ಭೂಕುಸಿತದಿಂದ ಚೇತರಿಸಿಕೊಳ್ಳುತ್ತಿರುವ ಕೊಡಗಿನಲ್ಲಿ ಮತ್ತೆ ಭೂಮಿಯೊಳಗೆ ಕೇಳಿಬರುತ್ತಿರುವ ಸದ್ದಿನಿಂದಾಗಿ ಆತಂಕ ಮನೆಮಾಡಿದೆ. ತಾಲೂಕಿನ ಕರಿಕೆ ಗ್ರಾಮದ ಚೆತ್ತುಕಾಯ ಪ್ರದೇಶದಲ್ಲಿ ಭೂಮಿಯೊಳಗೆ ಸೋಮವಾರ ಭಾರಿ ಶಬ್ದ ಕೇಳಿಸಿದ್ದು, ಈ ಭಾಗದ ಜನರಲ್ಲಿ ಭೀತಿ ಸೃಷ್ಟಿಸಿದೆ.

ಕಳ್ಳಾರ್‌ ಕೇಶವ ನಾಯ್ಕ ಎಂಬವರ ಮನೆಯ ಹಿಂಭಾಗದಲ್ಲಿ ಭೂಮಿಯೊಳಗೆ ಈ ಶಬ್ದ ಕೇಳಿಸಿದೆ. ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಗ್ಗೆ 11 ಗಂಟೆಯವರೆಗೆ ಈ ಶಬ್ದ ಕೇಳಿಬಂದಿದೆ. ಈ ಹಿಂದೆ ಕೊಡಗಿನಲ್ಲಿ ಭೂಮಿಯೊಳಗೆ ಇದೇ ರೀತಿಯ ಸದ್ದುಕೇಳಿಬಂದಿತ್ತು. ಆ ಬಳಿಕ ಭೂಕಂಪನದ ಅನುಭವ ಆಗಿತ್ತು. ಇದಾಗಿ ಕೆಲದಿನಗಳ ಬಳಿಕ ಸುರಿದ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡಕುಸಿದು ಭಾರೀ ಅನಾಹುತ ಸೃಷ್ಟಿಯಾಗಿತ್ತು.

Latest Videos
Follow Us:
Download App:
  • android
  • ios