ಬೆಂಗಳೂರು, [ಆ.04]: ಇನ್ನು 10 ದಿನದಲ್ಲಿ ಮತ್ತೆ ನನಗೆ ಶಾಸಕ ಸ್ಥಾನ ಸಿಗುತ್ತದೆ ಎಂದು ಅನರ್ಹಗೊಂಡ ಯಶವಂತಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್‌. ಟಿ. ಸೋಮಶೇಖರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿಯ ಬಂಡೇಮಠದಲ್ಲಿ ಇಂದು [ಭಾನುವಾರ] ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ನನಗೆ ಸ್ಪೀಕರ್ ಅವಕಾಶವೇ ನೀಡಲಿಲ್ಲ. ಇನ್ನು 10 ದಿನದಲ್ಲಿ ಮತ್ತೆ ನನಗೆ ಶಾಸಕ ಸ್ಥಾನ ಸಿಗುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

17 ಅನರ್ಹರ ಬಗ್ಗೆ ಶೆಟ್ಟರ್ ಕೊಟ್ಟ ಹೊಸ ನ್ಯೂಸ್, ದಂಗಾಗೋ ಸರದಿ ಯಾರದ್ದು!

ನಮ್ಮ ಖರ್ಚು ವೆಚ್ಚವನ್ನು ಸುಧಾಕರ್, ಬಸವರಾಜು, ಎಂಟಿಬಿ ನಾಗರಾಜ್ ವಹಿಸಿಕೊಂಡಿದ್ದಾರೆ. ಕೃಷ್ಣಾ ಬೈರೇಗೌಡರ ಹೇಳಿಕೆಗೆ ನೊಂದು ನಾನು ಮಾತನಾಡಿದ್ದೇನೆ. ಯಾರಿಗೂ ನೋವು ತರುವ ಪ್ರಯತ್ನ ಮಾಡಿಲ್ಲ. ನನಗೆ ಸ್ವಾಭಿಮಾನ ಮುಖ್ಯ ಎಂದರು. 

ನಾನು ಕಾಂಗ್ರೆಸ್‌ಗಾಗಿ ದುಡಿದಿದ್ದೇನೆ. ಇಡೀ ಭಾರತದಲ್ಲಿ 1 ಲಕ್ಷ 16 ಸಾವಿರ ಮೆಂಬರ್ ಶಿಪ್ ಮಾಡಿದ್ದೇನೆ. ಇಂದು ಇಲ್ಲೆ ಮುಗಿಯಬೇಕು, ನಾನು ಯಾರ ಮನೆಗೂ ಹೋಗಿ ಪಕ್ಷಕ್ಕೆ ಬರ್ತೀನಿ ಎಂದು ಕೇಳಿಲ್ಲ, ಯಾವ ಪಕ್ಷದ ನಾಯಕರು ನನ್ನನ್ನು ಕರೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮುಂಬೈನಲ್ಲಿ ತಂಗಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಸೋಮಶೇಖರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹ ಮಾಡಬೇಕೆಂದು ಅಂದಿನ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್  ಅವರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಸ್ಪೀಕರ್ ಅವರು ಸೋಮಶೇಖರ್ ಅವರನ್ನು  ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರು.

ಅನರ್ಹತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೇಟ್ಟಿಲೇರಿದ್ದು, ನ್ಯಾಯಾಲದಲ್ಲಿ ನ್ಯಾಯ ಸಿಗುವ ವಿಶ್ವಾಸದಲ್ಲಿದ್ದಾರೆ. ಇದ್ರಿಂದ ಮತ್ತೆ ನನಗೆ ಶಾಸಕ ಸ್ಥಾನ ಸಿಗುತ್ತೆ ಎನ್ನುವ ಮಾತುಗಳನ್ನಾಡಿರಬಹುದು.