ಬಳ್ಳಾರಿ : ರಾಜ್ಯದಲ್ಲಿ ಉಪ ಚುನಾವಣಾ ಕಣ ರಂಗೇರುತ್ತಿದೆ. ಇದೇ ವೇಳೆ ರಾಜಕೀಯ ನಾಯಕರ ನಡುವಿನ ಕದನ ಮುಂದುವರಿದಿದೆ. ಇದೀಗ ಮತ್ತೆ ಡಿಕೆಶಿ ವಿರುದ್ಧ ಬಿಜೆಪಿ ನಾಯಕ ಶ್ರೀ ರಾಮುಲು ವಾಗ್ದಾಳಿ ನಡೆಸಿದ್ದಾರೆ. 

 ಬಳ್ಳಾರಿಗೆ ಗೆದ್ರೆ ಮುಂದೆ ಎಲ್ಲ ಚುನಾವಣೆ ಗೆಲ್ತೀರಿ ಅಂತ ಜ್ಯೋತಿಷಿಗಳು ಹೇಳಿದ್ರಂತೆ. ಅದಕ್ಕಾಗಿ ರೊಕ್ಕ ಖರ್ಚು ಮಾಡಿ ಚುನಾವಣೆಯಲ್ಲಿ ಗೆಲ್ಲಾಕ ಬಂದಾರ ಎಂದು ಬಿ.ಶ್ರೀರಾಮುಲು ಅವರು ಡಿಕೆಶಿ ಅವರ ಹೆಸರೇಳದೆ ವಾಗ್ದಾಳಿ ನಡೆಸಿದರು. 

ನನ್ನೂರ ಜನ ರೊಕ್ಕಕ್ಕೆ ಮಾರು ಹೋಗಲ್ಲ. ಅವರು ಬಳಿ ಎಷ್ಟೇ ರೊಕ್ಕ ಇರಲಿ. ಎಷ್ಟೇ ಖರ್ಚು ಮಾಡಲಿ. ಬಳ್ಳಾರಿ ಜನ ಸ್ವಾಭಿಮಾನಿಗಳು. ದುಡ್ಡು ಪಡೆದು ಮತ ಹಾಕಲ್ಲ ಎಂದರು.