ನವದೆಹಲಿ[ಡಿ.09]: ‘ವಸುಂಧರಾ ರಾಜೇ ಅವರು ರಾಜಸ್ಥಾನ ಮುಖ್ಯಮಂತ್ರಿ ಆಗುವ ಮುನ್ನ ತೆಳ್ಳಗಿದ್ದರು. ಆದರೆ, ಇದೀಗ ಅವರು ಡುಮ್ಮಿಯಾಗಿದ್ದು, ಅವರಿಗೆ ವಿಶ್ರಾಂತಿಯ ಅಗತ್ಯವಿದೆ’ ಎಂಬ ತಮ್ಮ ವಿವಾದಾತ್ಮಕ ಹೇಳಿಕೆ ಬಗ್ಗೆ ಜೆಡಿಯು ಪಕ್ಷದ ಮಾಜಿ ಮುಖಂಡ ಶರದ್ ಯಾದವ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಶನಿವಾರ ಪ್ರತಿಕ್ರಿಯೆ ನೀಡಿದ ಯಾದವ್ ಅವರು, ‘ನನ್ನ ಹೇಳಿಕೆಯಿಂದ ರಾಜೇ ಅವರಿಗೆ ನೋವಾಗಿದ್ದರೆ, ನಾನು ವಿಷಾದಿಸುತ್ತೇನೆ. ರಾಜೇ ಮತ್ತು ನಾವು ಕುಟುಂಬ ಸ್ನೇಹಿತರಾಗಿದ್ದು, ಈ ಬಗ್ಗೆ ನೇರವಾಗಿ ಅವರಿಗೆ ಪತ್ರ ಬರೆಯುವೆ’ ಎಂದು ಹೇಳಿದ್ದಾರೆ.