ಮುಂಬೈ[ಜು.30]: ಮುಂಬೈ ಐಐಟಿಯ ಪರೀಕ್ಷಾ ಕೊಠಡಿಗೆ ಹಸು ನುಗ್ಗಿದ್ದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ವಿಡಿಯೋ ಈಗ ಐಐಟಿ ಅವರಣಕ್ಕೆ ಗೂಳಿಗಳು ನುಗ್ಗಿ ರಂಪಾಟ ನಡೆಸಿರುವ ಸುದ್ದಿ ವರದಿಯಾಗಿದೆ. ಗೂಳಿಗಳ ರಂಪಾಟದಿಂದ ಓರ್ವ ವಿದ್ಯಾರ್ಥಿ ಗಮಭೀರವಾಗಿ ಗಾಯಗೊಂಡಿದ್ದಾನೆ.

ಹೌದು ಹಸುಗಳು ನುಗ್ಗಿದ್ದ ಪ್ರಕರಣಕ್ಕೂ ಮೊದಲೇ ಗೂಳಿ ನುಗ್ಗಿದ್ದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಿಸಿಟಿವಿಯಲ್ಲಿ ಈ ಘಟನೆ ರೆಕಾರ್ಡ್ ಆಗಿದ್ದು, ಎರಡು ಗೂಳಿಗಳು ಪರಸ್ಪರ ಗುದ್ದಾಡುತ್ತಾ ಕಾಲೇಜು ಆವರಣ ಪ್ರವೇಶಿಸಿವೆ. ಈ ಸಂದರ್ಭದಲ್ಲಿ ಆವರಣದಲ್ಲಿ ನಿಂತಿದ್ದ ವಿದ್ಯಾರ್ಥಿ ಗೂಳಿಗಳ ಈ ಕಾದಾಟದ ನಡುವೆ ಸಿಲುಕಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ವಿದ್ಯರ್ಥಿಗೆ ಚಿಕಿತ್ಸೆ ಮುಂದುವರೆದಿದೆ.

ಮುಂಬೈ ಐಐಟಿ ಮೊದ​ಲ ಮಹಡಿ ಪರೀಕ್ಷಾ ಕೊಠ​ಡಿ​ಗೆ ಬಂತು ಬೀದಿ ಹಸು!

ಗಾಯಗೊಂಡ ವಿದ್ಯಾರ್ಥಿ ತಿರುವನಂತಪುರಂ ನಿವಾಸಿಯಾಗಿದ್ದು, ಅಕ್ಷಯ್ ಪ್ರಸನ್ನ ಲಾಠ್ ಎಂದು ಗುರುತಿಸಲಾಗಿದೆ. ಐಐಟಿ ಆವರಣದಲ್ಲಿ ಹಸು, ಗೂಳಿಗಳ ಹಾವಳಿ ಹೆಚ್ಚಾಗಿದ್ದು, ಇವುಗಳ ದಾಳಿ ತಡೆಯಲು ಸದ್ಯ ಕಾಲೇಜಿನಲ್ಲಿ ಸಮಿತಿಯನ್ನು ರಚಿಸಲಾಗಿದೆ.