ಮುಂಬೈ[ಜು.30]: ಐಐಟಿಗಳೆಂದರೆ ದೇಶದ ಅತ್ಯಂತ ಸುವ್ಯವಸ್ಥಿತ, ಶಿಕ್ಷಣ ಕೇಂದ್ರಗಳು. ಇಂಥ ಕೇಂದ್ರದೊಳಗೆ ಬೀದಿ ಹಸುಗಳು ಪ್ರವೇಶ ಮಾಡಬಹುದೇ? ನಂಬಿ.

ಮುಂಬೈ ಐಐಟಿಯ ಮೊದಲ ಮಹಡಿಯಲ್ಲಿರುವ ಪರೀಕ್ಷಾ ಕೊಠಡಿಯೊಂದಕ್ಕೆ ಬೀದಿದನವೊಂದು ಪ್ರವೇಶಿಸಿದ್ದು, ಒಳಗಿದ್ದ ವಿದ್ಯಾರ್ಥಿಗಳನ್ನು ಕಕ್ಕಾಬಿಕ್ಕಿ ಮಾಡಿದೆ. ಈ ಕುರಿತ ವಿಡಿಯೋ ಇದೀಗ ವೈರಲ್‌ ಆಗಿದೆ.

ದನ ಪ್ರವೇಶಿಸಿದ ವಿಷಯವನ್ನು ಐಐಟಿ ಆಡ​ಳಿತ ಮಂಡಳಿ ನಿರಾ​ಕ​ರಿ​ಸಿದ್ದರೆ, ವಿದ್ಯಾ​ರ್ಥಿ​ಗಳು ಐಐಟಿ ಒಳ​ಗಿನ ಕ್ಯಾಂಪಸ್‌ ಎಂಬು​ದನ್ನು ಸ್ಪಷ್ಟ​ಪ​ಡಿ​ಸಿ​ದ್ದಾರೆ.