ಪ್ರತಿಪಕ್ಷ ನಾಯಕರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಯೋಜಿಸಿದ್ದ ಭೋಜನ ಕೂಟಕ್ಕೆ ಹಾಜರಾಗದೇ ಪ್ರಧಾನಿ ಮೋದಿಯವರು ಆಹ್ವಾನಿಸಿದ ಭೋಜನಕೂಟದಲ್ಲಿ ಭಾಗವಹಿಸಿ ಮಾತುಕತೆ ನಡೆಸಿದರು. ಮಾರಿಷಸ್ ಪ್ರಧಾನ ಮಂತ್ರಿ ಪ್ರವಿಂದ್ ಜಗನೌತ್ ಭಾರತ ಭೇಟಿಯಲ್ಲಿದ್ದಾರೆ. ಅವರಿಗೆ ಗೌರವಾರ್ಥವಾಗಿ ಭೋಜನಕೂಟ ಯೋಜಿಸಿದ್ದು ಇದಕ್ಕೆ ಹಿರಿಯ ಮುಖಂಡರನ್ನು ಆಹ್ವಾನಿಸಲಾಗಿತ್ತು.
ನವದೆಹಲಿ (ಮೇ.27): ಪ್ರತಿಪಕ್ಷ ನಾಯಕರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಯೋಜಿಸಿದ್ದ ಭೋಜನ ಕೂಟಕ್ಕೆ ಹಾಜರಾಗದೇ ಪ್ರಧಾನಿ ಮೋದಿಯವರು ಆಹ್ವಾನಿಸಿದ ಭೋಜನಕೂಟದಲ್ಲಿ ಭಾಗವಹಿಸಿ ಮಾತುಕತೆ ನಡೆಸಿದರು. ಮಾರಿಷಸ್ ಪ್ರಧಾನ ಮಂತ್ರಿ ಪ್ರವಿಂದ್ ಜಗನೌತ್ ಭಾರತ ಭೇಟಿಯಲ್ಲಿದ್ದಾರೆ. ಅವರಿಗೆ ಗೌರವಾರ್ಥವಾಗಿ ಭೋಜನಕೂಟ ಯೋಜಿಸಿದ್ದು ಇದಕ್ಕೆ ಹಿರಿಯ ಮುಖಂಡರನ್ನು ಆಹ್ವಾನಿಸಲಾಗಿತ್ತು.
ಪ್ರಧಾನಿಯವರನ್ನು ಭೇಟಿ ಮಾಡಿದ ಬಳಿಕ, ಮಾರಿಷಸ್ ಪ್ರಧಾನಿಯವರಿಗೆ ಗೌರವಾರ್ಥವಾಗಿ ಭೋಜನಕೂಟ ಆಯೋಜಿಸಲಾಗಿತ್ತು. ಇದಕ್ಕೆ ಪ್ರಧಾನಿಯವರು ನನ್ನನ್ನು ಆಹ್ವಾನಿಸಿದ್ದರು. ಮಾರಿಷಸ್ ಭಾರತದ ಸ್ನೇಹ ಅನ್ಯೋನ್ಯವಾಗಿರುವುದು ಗೊತ್ತೆ ಇದೆ. ಅರ್ಧಕ್ಕಿಂತ ಹೆಚ್ಚಿನ ಮಾರಿಷಸ್ ಜನರು ಬಿಹಾರದ ಮೂಲದವರಾಗಿದ್ದಾರೆ. ಬಿಹಾರದ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಾನಿಲ್ಲಿಗೆ ಬಂದಿದ್ದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
