ಉತ್ತರ ಕೊರಿಯಾ ಎದುರಿಸಲು ಸೇನಾ ಕಾರ್ಯಾಚರಣೆ ನಡೆಸುವ ಆಯ್ಕೆ ಟ್ರಂಪ್ ಸರ್ಕಾರಕ್ಕೆ ಇದೆ ಎಂದು ಅಮೆರಿಕ ಭದ್ರತಾ ಸಲಹೆಗಾರ ಮೆಕ್‌ಮಾಸ್ಟರ್ ಹೇಳಿಕೆ ನೀಡಿದ ಬೆನ್ನಲ್ಲೇ ಟ್ರಂಪ್ ಹೇಳಿಕೆ ಹೊರಬಿದ್ದಿದೆ.

ವಾಷಿಂಗ್ಟನ್(ಸೆ.16): ಉತ್ತರ ಕೊರಿಯಾ ಜಪಾನ್ ಮೇಲೆ ಕ್ಷಿಪಣಿ ಪರೀಕ್ಷೆ ನಡೆಸಿದ ಬೆನ್ನಲ್ಲೇ, ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳನ್ನು ಬೆದರಿಸಲು ಯಾರಿಂದಲೂ ಸಾಧ್ಯವಿಲ್ಲ. ಉತ್ತರ ಕೊರಿಯಾದ ಮೇಲಿನ ದಾಳಿ ಆಯ್ಕೆಯನ್ನು ಮುಕ್ತವಾಗಿರಿಸಿಕೊಂಡಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಉತ್ತರ ಕೊರಿಯಾ ಎದುರಿಸಲು ಸೇನಾ ಕಾರ್ಯಾಚರಣೆ ನಡೆಸುವ ಆಯ್ಕೆ ಟ್ರಂಪ್ ಸರ್ಕಾರಕ್ಕೆ ಇದೆ ಎಂದು ಅಮೆರಿಕ ಭದ್ರತಾ ಸಲಹೆಗಾರ ಮೆಕ್‌ಮಾಸ್ಟರ್ ಹೇಳಿಕೆ ನೀಡಿದ ಬೆನ್ನಲ್ಲೇ ಟ್ರಂಪ್ ಹೇಳಿಕೆ ಹೊರಬಿದ್ದಿದೆ.

ಅಮೆರಿಕ ಏರ್‌ಪೋರ್ಸ್‌ನ 70ನೇ ವರ್ಷಾಚರಣೆಯಂದು ಸಿಬ್ಬಂದಿ ಉದ್ದೇಶಿಸಿ ಮಾತನಾಡಿದ ಟ್ರಂಪ್, ‘ನಮ್ಮ ಸೇನೆಯ ಸಾಮರ್ಥ್ಯ ಮತ್ತು ಬದ್ಧತೆ ನೋಡಿದ ಬಳಿಕ ನಾನು ಹಿಂದೆದಿಗಿಂತ ವಿಶ್ವಾಸ ಹೊಂದಿದ್ದೇನೆ. ನಮ್ಮನ್ನು ಯಾರೂ ಬೆದರಿಸಲು ಸಾಧ್ಯವಿಲ್ಲ. ಯಾವುದೇ ಬೆದರಿಕೆಯನ್ನು ಅಮೆರಿಕ ಸಮರ್ಥವಾಗಿ ಎದುರಿಸಬಲ್ಲದು. ಉತ್ತರ ಕೊರಿಯಾ ಮೇಲೆ ದಾಳಿ ಆಯ್ಕೆಯೂ ಮುಕ್ತವಾಗಿದೆ’ ಎಂದು ಹೇಳಿದ್ದಾರೆ.