ಕೇಂದ್ರ ಸರ್ಕಾರದ ಕಾರ್ಯವೈಖರಿಗೆ ಮೆಚ್ಚುಗೆಯ ಪ್ರಮಾಣವೇ ಹೆಚ್ಚು. ದೇಶದ 2 ಲಕ್ಷಕ್ಕೂ ಹೆಚ್ಚು ಜನರ ಸಮೀಕ್ಷೆ ನಡೆಸಿರುವ ಇಂಡಿಯಾ ಟುಡೇ, ದೇಶದ 200 ಪ್ರದೇಶಗಳಲ್ಲಿ ಜನತೆಯ ಅಭಿಪ್ರಾಯ ಸಂಗ್ರಹಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಇದೇ ಮೇ 26ಕ್ಕೆ 3 ವರ್ಷ ತುಂಬುತ್ತಿದೆ. 30 ವರ್ಷಗಳ ನಂತರ, ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಎನ್​ಡಿಎ ಸರ್ಕಾರ ಜನರ ಆಶೋತ್ತರಗಳನ್ನು ಈಡೇರಿಸಿದೆಯೇ? ಸರ್ಕಾರದ ಜನಪ್ರಿಯತೆ ಹೇಗಿದೆ ಎಂಬ ಬಗ್ಗೆ ಇಂಡಿಯಾ ಟುಡೇ ಸಮೀಕ್ಷೆ ನಡೆಸಿದೆ. ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಈಗಲೂ ಜನಪ್ರಿಯ ನಾಯಕ. ಕೇಂದ್ರ ಸರ್ಕಾರದ ಕಾರ್ಯವೈಖರಿಗೆ ಮೆಚ್ಚುಗೆಯ ಪ್ರಮಾಣವೇ ಹೆಚ್ಚು. ದೇಶದ 2 ಲಕ್ಷಕ್ಕೂ ಹೆಚ್ಚು ಜನರ ಸಮೀಕ್ಷೆ ನಡೆಸಿರುವ ಇಂಡಿಯಾ ಟುಡೇ, ದೇಶದ 200 ಪ್ರದೇಶಗಳಲ್ಲಿ ಜನತೆಯ ಅಭಿಪ್ರಾಯ ಸಂಗ್ರಹಿಸಿದೆ. ಸರ್ಕಾರಕ್ಕೆ 2 ವರ್ಷ ತುಂಬಿದಾಗ ನಡೆಸಿದ್ದ ಸಮೀಕ್ಷೆಗೂ, ಈಗಿನ ಸಮೀಕ್ಷೆಗೂ ಹೋಲಿಸಿದರೆ, ಕೇಂದ್ರ ಸರ್ಕಾರದ ಜನಪ್ರಿಯತೆ ಇನ್ನಷ್ಟು ಹೆಚ್ಚಿದೆ.

=============

ಕೇಂದ್ರ ಸರ್ಕಾರದ ಸಾಧನೆ ತೃಪ್ತಿಕರವಾಗಿದೆಯೇ?

ಉತ್ತಮ - ಶೇ. 44

ಪರವಾಗಿಲ್ಲ - ಶೇ. 39

ಕೆಟ್ಟದಾಗಿದೆ - ಶೇ. 17

ಕೇಂದ್ರ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಿದೆಯೇ?

ಹೌದು - ಶೇ.59
ಇಲ್ಲ - ಶೇ.32
ಗೊತ್ತಿಲ್ಲ - ಶೇ.9

ಬೆಲೆ ಏರಿಕೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದ ಕ್ರಮಗಳು ತೃಪ್ತಿಕರವಾಗಿವೆಯೇ?

ಹೌದು - ಶೇ.28
ಇಲ್ಲ - ಶೇ.66
ಗೊತ್ತಿಲ್ಲ - ಶೇ. 6

ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿವೆಯೇ?

ಹೌದು - ಶೆ.60
ಇಲ್ಲ - ಶೇ.28

ಕೇಂದ್ರ ಸರ್ಕಾರದ ಯಾವ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗುತ್ತಿದೆ?

ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್​ಫರ್ ಯೋಜನೆ - ಶೇ. 47
ಮೇಕ್ ಇನ್ ಇಂಡಿಯಾ - ಶೇ.8
ಸ್ವಚ್ಛ ಭಾರತ್ ಯೋಜನೆ - ಶೇ.16
ಜನ್ ಧನ್ ಯೋಜನೆ - ಶೇ.29

3 ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುವ ಭರವಸೆ ಮೂಡಿದೆಯೇ?

ಹೌದು - ಶೇ.21
ಇಲ್ಲ - ಶೇ.63
ಗೊತ್ತಿಲ್ಲ - ಶೇ.16

ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿದೆಯೇ?

ಹೌದು - ಶೇ.81
ಇಲ್ಲ - ಶೇ.13
ಗೊತ್ತಿಲ್ಲ - ಶೇ.6

ಪಾಕಿಸ್ತಾನವನ್ನು ಭಾರತ ನಿಭಾಯಿಸುತ್ತಿರುವ ರೀತಿ ಸರಿಯಾಗಿದೆಯೇ?

ಹೌದು - ಶೇ.64
ಇಲ್ಲ - ಶೇ.30
ಗೊತ್ತಿಲ್ಲ - ಶೇ.6