Asianet Suvarna News Asianet Suvarna News

6 ವರ್ಷದ ಬಾಲಕಿ ತಂದೆಗಾದಳು ಅಮ್ಮ.. ಜೀವನ ಅಂದ್ರೆ ಇದೇನಾ?

ಜೀವನದಲ್ಲಿ ಕಷ್ಟ-ನಷ್ಟಗಳು ಅದು ಎಲ್ಲಿಂದ ಬರುತ್ತವೆಯೋ ಹೇಳಲು ಅಸಾಧ್ಯ. ಈ 6 ವರ್ಷದ ಚೀನಾ ಬಾಲಕಿಯ ಬಾಳಲ್ಲಿ ಅಂಥದ್ದೊಂದು ಸಂದರ್ಭ ಎದುರಾಗಿದೆ. ಬಾಲಕಿ ಹೋರಾಟಕ್ಕೆ ತಲೆ ಕೆಡಿಸಿಕೊಳ್ಳದೆ ತನ್ನ ತಂದೆಯನ್ನೇ ಮಗುವನ್ನಾಗಿ ಪಾಲನೆ ಮಾಡುತ್ತಿದ್ದಾಳೆ.

After Mother Abandons Them 6-Year-Old Girl Cares For Paralysed Father China
Author
Bengaluru, First Published Oct 3, 2018, 8:27 PM IST
  • Facebook
  • Twitter
  • Whatsapp

ಬೀಜಿಂಗ್[ಅ.03]  6 ವರ್ಷದ ಬಾಲಕಿಯ ಧೈರ್ಯ ಮತ್ತು ಆತ್ಮ ಶಕ್ತಿಗೆ ಒಂದು ಸೆಲ್ಯೂಟ್  ಹೇಳಲೇಬೇಕು. ಜೀಯಾ ಜೀಯಾ  ಎಂಬ ಪುಟ್ಟ ಬಾಲಕಿ ಪಾರ್ಶ್ವವಾಯುಗೆ ತುತ್ತಾದ ತನ್ನ ತಂದೆಯ ಆರೖಕೆ ಮಾಡುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಗಂಡನ ಸ್ಥಿತಿ ನೋಡಿದ ಹೆಂಡತಿ ಅಂದರೆ ಬಾಲಕಿಯ ತಾಯಿ ಬೇರೆ ಜೇವನ ಅರಸಿ ಹೊರಟು ಹೋಗಿದ್ದಾಳೆ. ಈಗ ಬಾಲಕಿಯೇ ಪ್ರತಿದಿನ ತಂದೆಗೆ ಮಸಾಜ್ ಮಾಡಿ ಶಾಲೆಗೆ ತೆರಳುತ್ತಿದ್ದಾಳೆ.

ಬಾಲಕಿ ತೆರಳಿದ ಮೇಲೆ ಆಕೆಯ ಅಜ್ಜ-ಅಜ್ಜಿ  ಮಗನನ್ನು ನೋಡಿಕೊಳ್ಳುತ್ತಿದ್ದಾರೆ. ಈಸುದ್ದಿ ಚೀನಾ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು ಲಕ್ಷಾಂತರ ಜನ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Follow Us:
Download App:
  • android
  • ios