ಬೆಂಗಳೂರು :  ಪಕ್ಷದ ಶಾಸಕ ರಮೇಶ್‌ ಜಾರಕಿಹೊಳಿ ಅವರು ಮೇ 23ರಂದು ಪಕ್ಷ ಬಿಟ್ಟು ಹೋಗುವುದಾಗಿ ಹೇಳಿರಬಹುದು. ಆದರೆ, ಮೇ 23ರ ಬಳಿಕ ಅವರ ಸಮಸ್ಯೆ ಬಗೆಹರಿದು ಅವರೂ ಸಹ ನಮ್ಮ ದಾರಿಗೆ ಬರುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಉರುಳಿಸಬೇಕು ಎಂಬುದು ಬಿಜೆಪಿಯ ಹಗಲು ಕನಸು. ಅದು ಎಂದಿಗೂ ಈಡೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಮೇಶ್‌ ಜಾರಕಿಹೊಳಿ ಪಕ್ಷ ಬಿಟ್ಟು ಹೋಗುವುದಿಲ್ಲ. ಅವರು ಪಕ್ಷ ಬಿಟ್ಟು ಹೋಗುವುದಕ್ಕೆ ಅವರ ಜೊತೆ ಯಾರೂ ಇಲ್ಲ. ಮೇ 23ರ ಬಳಿಕ ಹೋಗುತ್ತೇನೆ ಎಂದು ಹೇಳಿದ್ದರೂ ಅದು ಆಗುವುದಿಲ್ಲ. ಅವರು ಸಹ ನಮ್ಮ ದಾರಿಗೆ ಬರುತ್ತಾರೆ ಎಂದು ತಿಳಿಸಿದರು.