ಇತ್ತೀಚೆಗೆ ದಿಲ್ಲಿ ಸಮೀಪದ ಫೋರ್ಟಿಸ್ ಹೆಲ್ತ್’ಕೇರ್ ಆಸ್ಪತ್ರೆ 15 ದಿನದ ಚಿಕಿತ್ಸೆಗೆ 18 ಲಕ್ಷ ಬಿಲ್ ಮಾಡಿದ್ದು, ಮ್ಯಾಕ್ಸ್ ಆಸ್ಪತ್ರೆಯಲ್ಲಿ ಬದುಕಿದ್ದ ಮಗು ಸತ್ತಿದೆ ಎಂದು ವರದಿ ನೀಡಿದ ಘಟನೆಗಳ ಬೆನ್ನಲ್ಲೇ, ಇದೀಗ ದೆಹಲಿಯ ಮತ್ತೊಂದು ಖಾಸಗಿ ಆಸ್ಪತ್ರೆಯ ಕರ್ಮಕಾಂಡ ಬಯಲಾಗಿದೆ.
ನವದೆಹಲಿ(ಡಿ.11): ಇತ್ತೀಚೆಗೆ ದಿಲ್ಲಿ ಸಮೀಪದ ಫೋರ್ಟಿಸ್ ಹೆಲ್ತ್’ಕೇರ್ ಆಸ್ಪತ್ರೆ 15 ದಿನದ ಚಿಕಿತ್ಸೆಗೆ 18 ಲಕ್ಷ ಬಿಲ್ ಮಾಡಿದ್ದು, ಮ್ಯಾಕ್ಸ್ ಆಸ್ಪತ್ರೆಯಲ್ಲಿ ಬದುಕಿದ್ದ ಮಗು ಸತ್ತಿದೆ ಎಂದು ವರದಿ ನೀಡಿದ ಘಟನೆಗಳ ಬೆನ್ನಲ್ಲೇ, ಇದೀಗ ದೆಹಲಿಯ ಮತ್ತೊಂದು ಖಾಸಗಿ ಆಸ್ಪತ್ರೆಯ ಕರ್ಮಕಾಂಡ ಬಯಲಾಗಿದೆ.
ದೆಹಲಿಯ ಬಿಎಲ್’ಕೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ 5 ವರ್ಷದ ದೇವಾ ಎಂಬ ಬಾಲಕಿಯನ್ನು ಮೂಳೆ ಮಜ್ಜೆ ಚಿಕಿತ್ಸೆಗಾಗಿ ಅ.31ರಂದು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಯ ಬಳಿಕ ಮಗುವಿಗೆ ತೀವ್ರ ಅನಾರೋಗ್ಯ ಕಾಣಿಸಿಕೊಂಡಿತ್ತು. ನ.25ರಂದು ಮಗು ಸಾವನ್ನಪ್ಪಿತ್ತು. ಆದರೆ ಇದೀಗ ಆಸ್ಪತ್ರೆ 9.5 ಲಕ್ಷ ರು. ಬಿಲ್ ನೀಡಿದ್ದು, ಪೋಷಕರನ್ನು ಹೈರಾಣಾಗಿಸಿದೆ.
