Asianet Suvarna News Asianet Suvarna News

ಅಮಿತ್ ಶಾಗೆ ಊಟ ಬಡಿಸಿ ಟಿಎಂಸಿ ಸೇರಿದ ದಂಪತಿಗಳು!

ಕಳೆದ ವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಔತಣಕೂಟ ಏರ್ಪಡಿಸಿದ್ದ ಈ ದಂಪತಿಗಳು ಇಂದು ಅಮಿತ್ ಶಾರವರ ರಾಜಕೀಯ ಕಟ್ಟಾ ವಿರೋಧಿ ಮಮತಾ ಬ್ಯಾನರ್ಜಿಯವರ ಪಕ್ಷ ಸೇರಿ ಅಚ್ಚರಿ ಮೂಡಿಸಿದ್ದಾರೆ.

After Lunch And Selfies With Amit Shah Bengal Couple Joins Trinamool
  • Facebook
  • Twitter
  • Whatsapp

ನವದೆಹಲಿ (ಮೇ.03): ಕಳೆದ ವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಔತಣಕೂಟ ಏರ್ಪಡಿಸಿದ್ದ ಈ ದಂಪತಿಗಳು ಇಂದು ಅಮಿತ್ ಶಾರವರ ರಾಜಕೀಯ ಕಟ್ಟಾ ವಿರೋಧಿ ಮಮತಾ ಬ್ಯಾನರ್ಜಿಯವರ ಪಕ್ಷ ಸೇರಿ ಅಚ್ಚರಿ ಮೂಡಿಸಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯ ಪ್ರವಾಸೋದ್ಯಮ ಸಚಿವ ಗುಲಾಂ ನಬಿ ಆಜಾದ್ ಗೀತಾ ಮತ್ತು ಮಹಲಿ ದಂಪತಿಗಳನ್ನು ತಮ್ಮ ಪಕ್ಷಕ್ಕೆ ಸ್ವಾಗತಿಸಿದ್ದಾರೆ.

ಕಳೆದ ವಾರ ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮಹಲಿ ದಂಪತಿಗಳ ಮನೆಯಲ್ಲಿ ಮಧ್ಯಾಹ್ನ ಊಟಕ್ಕೆ ತಂಗಿದ್ದರು. ಸಾಮಾನ್ಯರಂತೆ ನೆಲದ ಮೇಲೆ ಕುಳಿತು ಬಾಳೆಎಲೆಯಲ್ಲಿ ಊಟ ಮಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಕೂಡಾ ಅಮಿತ್ ಶಾಗೆ ಸಾಥ್ ನೀಡಿದರು. ಆ ದಂಪತಿಗಳ ಜೊತೆ ಸೆಲ್ಫಿಯನ್ನೂ ತೆಗೆದುಕೊಂಡರು.

ಇದೀಗ ಗೀತಾ ಮಹಲಿ ದಂಪತಿಗಳು ಟಿಎಂಸಿ ಸೇರಿರುವುದನ್ನು ಅಲ್ಲಗಳೆಯುತ್ತಾ, ಅವರನ್ನು ಕಿಡ್ನಾಪ್ ಮಾಡಿ ಬಲವಂತವಾಗಿ ತೃಣಮೂಲ ಕಾಂಗ್ರೆಸ್ ಗೆ ಸೇರಿಸಿಕೊಳ್ಳಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ನಮ್ಮನ್ನು ಹೆದರಿಸಿಲ್ಲ. ಹಣದ ಅಥವಾ ಇನ್ಯಾವುದೇ ಆಮಿಷವೊಡ್ಡಿಲ್ಲ. ನಮಗೆ ಮಮತಾ ಬ್ಯಾನರ್ಜಿಯೆಂದರೆ ಇಷ್ಟ ಹಾಗಾಗಿ ತೃಣಮೂಲ ಕಾಂಗ್ರೆಸ್ ಸೇರಿದ್ದೇವೆ ಎಂದು ಗೀತಾ ಮಹಲಿ ಹೇಳಿದ್ದಾರೆ.

ಅಮಿತ್ ಶಾಗೆ ಊಟ ಏರ್ಪಡಿಸಿದಂತೆ ಮಮತಾ ಬ್ಯಾನರ್ಜಿಯವರಿಗೂ ಊಟ ಏರ್ಪಡಿಸುತ್ತೀರಾ ಎಂದು ಮಹಲಿಯವರನ್ನು ಕೇಳಿದಾಗ, ಮೊದಲು ತಡವರಿಸಿದರೂ, ನಂತರ ಅವರು ಬಂದರೆ ಖಂಡಿತ ಊಟ ಹಾಕುತ್ತೇವೆ ಎಂದರು.

ವರದಿ: ಎನ್ 'ಡಿಟಿವಿ

Follow Us:
Download App:
  • android
  • ios