ಕೋಲಾರ ಅಷ್ಟೇ ಅಲ್ಲ ದಾವಣಗೆರೆಯಲ್ಲೂ ಮಕ್ಕಳ ಮರಣ ಮೃದಂಗ ಮುಂದುವರೆದಿದೆ. ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆ ಹೆರಿಗೆ ಮತ್ತು ಮಕ್ಕಳ ವಿಭಾಗದಲ್ಲಿ ಒಂದೇ ದಿನ ಮೂರು ಮಕ್ಕಳು ಸಾವನ್ನಪ್ಪಿವೆ.

ದಾವಣಗೆರೆ(ಆ.23): ಕೋಲಾರ ಅಷ್ಟೇ ಅಲ್ಲ ದಾವಣಗೆರೆಯಲ್ಲೂ ಮಕ್ಕಳ ಮರಣ ಮೃದಂಗ ಮುಂದುವರೆದಿದೆ. ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆ ಹೆರಿಗೆ ಮತ್ತು ಮಕ್ಕಳ ವಿಭಾಗದಲ್ಲಿ ಒಂದೇ ದಿನ ಮೂರು ಮಕ್ಕಳು ಸಾವನ್ನಪ್ಪಿವೆ.

ದಾವಣಗೆರೆ ತಾಲ್ಲೂಕಿನ ರುದ್ರನಕಟ್ಟೆ ಗ್ರಾಮದ ನೇತ್ರಾವತಿ ಎಂಬ ಗರ್ಭಿಣಿ ಹೆರಿಗೆಯಾದ ಎರಡು ಮಕ್ಕಳು ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯವೇ ಶಿಶುಗಳ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಆದರೆ, ಆಸ್ಪತ್ರೆಗೆ ಬರುವ ಮುನ್ನವೇ ತಾಯಿಯ ಹೊಟ್ಟೆಯಲ್ಲಿ ಸಾವನ್ನಪ್ಪಿದ್ದವು ಅಂತ ವೈದ್ಯರು ಹೇಳ್ತಿದ್ದಾರೆ.

ಗರ್ಭಿಣಿ ಸಂಬಂಧಿಕರು ಆಸ್ಪತ್ರೆಗೆ ಬರುವಾಗ ಶಿಶುಗಳ ಬದುಕಿರುವ ಸೂಚನೆಯಿತ್ತು. ಸೀಜೇರಿಯನ್ ಮಾಡಿದ್ರೆ ಮಕ್ಕಳು ಬದುಕುತ್ತಿದ್ದವು ಆದರೆ ತಡವಾಗಿ ಚಿಕಿತ್ಸೆ ನೀಡಿದ್ದಕ್ಕೆ ಸಾವನ್ನಪ್ಪಿವೆ ಎಂದು ಹೇಳುತ್ತಾರೆ. 

ಇನ್ನೊಂದು ಪ್ರಕರಣದಲ್ಲಿ ಮಾಕನೂರಿನ ಸವಿತಾ ಎಂಬುವರ ಗಂಡು ಶಿಶು ಸಾವನ್ನಪ್ಪಿದ್ದು ಸಾವಿಗೆ ಸ್ಪಷ್ಟ ಕಾರಣ ತಿಳಿಯದಾಗಿದೆ.