ಪ್ರಮುಖ ಟೀವಿ ಚಾನಲ್‌ವೊಂದರ ಪ್ರೋಗ್ರಾಮ್ ಮುಖ್ಯಸ್ಥರೊಬ್ಬರನ್ನು ನಾನು ಭೇಟಿಯಾದಾಗ ಅವರು ನನ್ನನ್ನು ಖಾಸಗಿಯಾಗಿ ಭೇಟಿಯಾಗಬಹುದೇ ಎಂದು ಕೇಳಿದ್ದರು.
ಚೆನ್ನೈ(ಫೆ.20): ಮಲಯಾಳದ ಖ್ಯಾತ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಬೆನ್ನಲ್ಲೇ, ತಮಿಳು ನಟಿ ವರಲಕ್ಷ್ಮಿ ಶರತ್ಕುಮಾರ್, ತಮಗೂ ಕಿರುಕುಳ ನೀಡಲಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಮಹಿಳಾ ಸುರಕ್ಷೆ ಎನ್ನುವುದು ಹಾಸ್ಯದ ವಿಷಯವಾಗಿದೆ. ಕೊಚ್ಚಿಯಲ್ಲಿ ಇತರ ನಟಿಯರಂತೆ ನಾನು ಕೂಡ ಕಿರುಕುಳಕ್ಕೆ ಒಳಗಾಗಿದ್ದೆ. ಪ್ರಮುಖ ಟೀವಿ ಚಾನಲ್ವೊಂದರ ಪ್ರೋಗ್ರಾಮ್ ಮುಖ್ಯಸ್ಥರೊಬ್ಬರನ್ನು ನಾನು ಭೇಟಿಯಾದಾಗ ಅವರು ನನ್ನನ್ನು ಖಾಸಗಿಯಾಗಿ ಭೇಟಿಯಾಗಬಹುದೇ ಎಂದು ಕೇಳಿದ್ದರು. ಅದರ ಅರ್ಥ ಬೇರೆಯೇ ಆಗಿತ್ತು. ನಾನು ಈ ಆಘಾತ ಮತ್ತು ಕೋಪವನ್ನು ನನ್ನೊಳಗೇ ಇಟ್ಟುಕೊಂಡಿದ್ದೆ ಎಂದು ವರಲಕ್ಷ್ಮಿ ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ.
