ಉತ್ತರ ಕರ್ನಾಟಕ  ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಕೇಳಿಬಂದಿದೆ. ಈ ಬಾರಿ ಇದಕ್ಕೆ ಕಾರಣವಾಗಿರುವುದು ರಾಜ್ಯ ಬಜೆಟ್. ಈ ಬಾರಿ ಪ್ರತ್ಯೇಕ ರಾಜ್ಯದ ವಿಚಾರ ಹೇಳಿದ್ದು ಯಾವ ರಾಜಕಾರಣಿ ಅಲ್ಲ.

ಹುಬ್ಬಳ್ಳಿ[ಜು.6] ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆಗಸ್ಟ್ 2 ರಿಂದ ಹಾವೇರಿ ಜಿಲ್ಲೆಯಿಂದ ಹೋರಾಟ ಆರಂಭವಾಗಲಿದೆ ಎಂದು ಉತ್ತರ ಕರ್ನಾಟಕ ರೈತ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ ಹೇಳಿದ್ದಾರೆ.

ರಾಜ್ಯ ಸರ್ಕಾರದಿಂದ ಯಾವತ್ತೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಬಂದಿದೆ. ಅದೇ ರೀತಿ ಸಿ.ಎಂ. ಎಚ್.ಡಿ.‌ ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್ ನಲ್ಲಿ ಮತ್ತೆ ಅನ್ಯಾಯವಾಗಿದೆ‌‌‌ ಎಂದು ಅವರು ಆರೋಪಿಸಿದ್ದಾರೆ.

ಉತ್ತರ ಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯದ ಹೋರಾಟವೇ ಸೂಕ್ತ ಮಾರ್ಗವಾಗಿದೆ. ಅದೇ ರೀತಿ ರೈತರನ್ನು ಉದ್ಧಾರ ಮಾಡುವುದಾಗಿ ಭರವಸೆ ನೀಡಿದ ಕುಮಾರಸ್ವಾಮಿ ರೈತರ ಸಂಪೂರ್ಣ ಸಾಲ ಕೂಡ ಮನ್ನಾ ಮಾಡಿಲ್ಲ. ರಾಜ್ಯ ಸರಕಾರ ಈ ಕೂಡಲೇ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಅವರು ಎಚ್ಚರಿಸಿದ್ದಾರೆ.