ಶೇ.74 ಬಂದರೂ ಕಡಿಮೆ ಅಂಕವೆಂದು ಆತ್ಮಹತ್ಯೆ! ?

After got low Marks 2nd Puc Student Commit Suicide
Highlights

ತೇಜಸ್ ಅವರ ತಂದೆ ಕೃಷಿಕರಾಗಿದ್ದು, ಕುಟುಂಬ ಸುಗ್ಗಟ ದಲ್ಲಿ ನೆಲೆಸಿ ದೆ. ತೇಜಸ್ ವಿದ್ಯಾರಣ್ಯಪುರದ ಎಂಇಎಸ್ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿದ್ಯಾರ್ಥಿಯಾಗಿದ್ದ. ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತೇಜಸ್ ಪಿಯುಸಿ ಫಲಿತಾಂಶ ನೋಡಿದು, ಶೇ.74ರಷ್ಟು ಅಂಕ ಪಡೆದಿದ್ದ. ತಾನು ಶೇ.90ರಷ್ಟು ಅಂಕವನ್ನು  ನಿರೀಕ್ಷೆ ಮಾಡಿದೆ. ಆದರೆ ಅದಕ್ಕಿಂತ ಕಡಿಮೆ ಅಂಕ ಬಂದಿ ದೆ ಎಂ ದು ಪೋಷಕರ ಬಳಿ  ಬೇಸರ ವ್ಯಕ್ತಪಡಿಸಿದ.

ಬೆಂಗಳೂರು(ಮೇ.1): ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೭೪ರಷ್ಟು ಅಂಕ ಪಡೆ ದರೂ ತಾನು  ನಿರೀಕ್ಷಿಸಿ ದಕ್ಕಿಂತ ಕಡಿಮೆ ಅಂಕ ಬಂದಿದೆ ಎಂದು ನೊಂದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಜಾಲ ಸಮೀಪ ದ ಸುಗ್ಗಟ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಸುಗ್ಗಟ  ನಿವಾಸಿ ರವಿಕುಮಾರ್ ಅವರ ಪುತ್ರ ತೇಜಸ್ ಗೌಡ (17) ಆತ್ಮಹತ್ಯೆ ಮಾಡಿಕೊಂಡವರು.ತೇಜಸ್ ಅವರ ತಂದೆ ಕೃಷಿಕರಾಗಿದ್ದು, ಕುಟುಂಬ ಸುಗ್ಗಟ ದಲ್ಲಿ ನೆಲೆಸಿ ದೆ. ತೇಜಸ್ ವಿದ್ಯಾರಣ್ಯಪುರದ ಎಂಇಎಸ್ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿದ್ಯಾರ್ಥಿಯಾಗಿದ್ದ.ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತೇಜಸ್ ಪಿಯುಸಿ ಫಲಿತಾಂಶ ನೋಡಿದು, ಶೇ.74ರಷ್ಟು ಅಂಕ ಪಡೆದಿದ್ದ. ತಾನು ಶೇ.90ರಷ್ಟು ಅಂಕವನ್ನು  ನಿರೀಕ್ಷೆ ಮಾಡಿದೆ. ಆದರೆ ಅದಕ್ಕಿಂತ ಕಡಿಮೆ ಅಂಕ ಬಂದಿ ದೆ ಎಂ ದು ಪೋಷಕರ ಬಳಿ  ಬೇಸರ ವ್ಯಕ್ತಪಡಿಸಿದ್ದ.
ತೇಜಸ್ ತಂದೆ ರವಿಕುಮಾರ್  ಪುತ್ರನಿಗೆ ಧೈರ್ಯ ತುಂಬಿದಲ್ಲದೆ, ಉತ್ತಮವಾದ ಅಂಕ ಬಂದಿದೆ ಎಂದು ಸಮಾಧಾನಪಡಿಸಿದರು. ಆದರೂ ತೇಜಸ್  ಬೇಸರದಲ್ಲಿಯೇ ಇದ್ದ. ಈ ವೇಳೆ ಮನೆಯಲ್ಲಿ ಎಲ್ಲರೂ ಟಿ.ವಿ. ವೀಕ್ಷಿಸುತ್ತಿದರು. ತೇಜಸ್ ಮಧ್ಯಾಹ್ನ 1.45 ರ ಸುಮಾರಿಗೆ ತನ್ನ ಕೊಠಡಿಗೆ ತೆರಳಿದ. ಕೊಠಡಿಗೆ ತೆರಳಿದ ಪುತ್ರ ಒಂದು ಗಂಟೆಯಾದರೂ ಹೊರಗೆ ಬಂದಿರಲಿಲ್ಲ. ಆತಂಕಗೊಂಡ ಪೋಷಕರು ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು  ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದರು.

loader