ಇದರಿಂದ ತೀರಾ ಮುಜುಗರಕ್ಕೆ ಒಳಗಾದ ವಧು ಅದೇ ಕ್ಷಣವೇ ಬೇಡ ಎಂದಿದ್ದಾಳೆ

ಶಹಜಹಾನ್'ಪುರ(ಜು.01): ತನ್ನ ಭಾವಿ ಪತಿಯು ನಾಗಿನ್(ಹಾವು) ನೃತ್ಯ ನೋಡಿ ಬೆಚ್ಚಿಬಿದ್ದ ವಧು, ತಾಈ ಕಟ್ಟುವುದಕ್ಕೆ ಕಲವೇ ತಿಂಗಳ ಮೊದಲು ಮದುವೆಯಿಂದ ಹಿಂದೆ ಸರಿದ ಘಟನೆ ಶಹಜಹಾನ್'ಪುರದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಗಿದ್ದೇನಪ್ಪ ಅಂದರೆ, ವರನ ಕಡೆಯವರು, ವಧುವಿನ ಮನೆಗೆ ಬಂದಾಗ ಅಲ್ಲಿ ಅವರಿಗೆ ಅದ್ದೂರಿ ಸ್ವಾಗತ ಕೋರಲಾಗಿತ್ತು. ಹೀಗೆ ದಿಬ್ಬಣ ಎದುರುಗೊಳ್ಳುವ ವೇಳೆ ಅಲ್ಲಿ ಸಂಗೀತ ನುಡಿಸುತ್ತಿದ್ದವರು ನಾಗಿನ್ ಹಾಡು ಹಾಡಿದ್ದಾರೆ. ಈ ವೇಳೆ ಸ್ವಲ್ಪ ಟೈಟಾಗಿ ಬಂದಿದ್ದ ವರನಿಗೆ ಮ್ಯೂಸಿಕ್ ಕೇಳಿದ ಮೇಲೆ ಕುಡಿತದ ಮತ್ತು ಇನ್ನಷ್ಟು ಹೆಚ್ಚಾಗಿ ಅಲ್ಲೆ ಡ್ಯಾನ್ಸ್ ಶುರು ಮಾಡಿದ್ದಾನೆ. ಇದರಿಂದ ತೀರಾ ಮುಜುಗರಕ್ಕೆ ಒಳಗಾದ ವಧು ಅದೇ ಕ್ಷಣವೇ ಇಂಥ ಟೈಟಾದ ಕುಡುಕ ಗಂಡ ಬೇಡ ಎಂದು ಹೇಳಿ ಮದುವೆ ತಿರಸ್ಕರಿಸಿದ್ದಾಳೆ.