ಯೋಧರಿಗೆ ನೀಡುವ ಆಹಾರ ಹಾಗೂ ಅಲ್ಲಿನ ವ್ಯವಸ್ಥೆಯ BSF ಯೋಧನೊಬ್ಬ ಅಸಮಾಧಾನ ವ್ಯಕ್ತಪಡಿಸಿ ನಿನ್ನೆಯಷ್ಟೇ ತಮ್ಮ ಫೇಸ್'ಬುಕ್'ನಲ್ಲಿ ವಿಡಿಯೋಗಳನ್ನು ಹಾಕಿದ್ದರು. ಇವರು ಹಾಕಿದ ಈ ವಿಡಿಯೋಗಳು ವೈರಲ್ ಆಗಿ ದೇಶದಾದ್ಯಂತ ಚರ್ಚೆಗೀಡಾಗಿದ್ದವು ಹಾಗೂ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಠೀಕೆಗಳು ಕೇಳಿ ಬಂದಿದ್ದವು. ಇವೆಲ್ಲಾ ಬೆಳವಣಿಗೆಗಳ ಬಳಿಕ ಸರ್ಕಾರ ಈಗ ಈ ಪ್ರಕರಣದ ತನಿಖೆ ನಡೆಸಲು ಸೂಚಿಸಿದೆ.
ನವದೆಹಲಿ(ಜ.10): ಯೋಧರಿಗೆ ನೀಡುವ ಆಹಾರ ಹಾಗೂ ಅಲ್ಲಿನ ವ್ಯವಸ್ಥೆಯ BSF ಯೋಧನೊಬ್ಬ ಅಸಮಾಧಾನ ವ್ಯಕ್ತಪಡಿಸಿ ನಿನ್ನೆಯಷ್ಟೇ ತಮ್ಮ ಫೇಸ್'ಬುಕ್'ನಲ್ಲಿ ವಿಡಿಯೋಗಳನ್ನು ಹಾಕಿದ್ದರು. ಇವರು ಹಾಕಿದ ಈ ವಿಡಿಯೋಗಳು ವೈರಲ್ ಆಗಿ ದೇಶದಾದ್ಯಂತ ಚರ್ಚೆಗೀಡಾಗಿದ್ದವು ಹಾಗೂ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಠೀಕೆಗಳು ಕೇಳಿ ಬಂದಿದ್ದವು. ಇವೆಲ್ಲಾ ಬೆಳವಣಿಗೆಗಳ ಬಳಿಕ ಸರ್ಕಾರ ಈಗ ಈ ಪ್ರಕರಣದ ತನಿಖೆ ನಡೆಸಲು ಸೂಚಿಸಿದೆ.
ನಿನ್ನೆಯಷ್ಟೇ BSF 29ನೇ ಬೆಟಾಲಿಯನ್'ನ ಯೋಧ ತೇಜ್ ಬಹದ್ದೂರ್ ಯಾದವ್ ಸೈನಿಕರಿಗೆ ಅಧಿಕಾರಿಗಳು ಪೂರೈಸುತ್ತಿರುವ ಆಹಾರದ ಕುರಿತಾಗಿ ವಿಡಿಯೋಗಳನ್ನು ತಮ್ಮ ಫೇಸ್ಬುಕ್'ನಲ್ಲಿ ಹಾಕಿಕೊಂಡಿದ್ದರು. ಇದರೊಂದಿಗೆ ಸರ್ಕಾರ ದವಸ ಧಾನ್ಯಗಳನ್ನು ನೀಡುತ್ತಿದ್ದರೂ ಇದು ನಮಗೆ ತಲುಪುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳು ನಡೆಸುತ್ತಿರುವ ಭ್ರಷ್ಟಾಚಾರ ವಿಚಾರವನ್ನು ಹೊರ ಹಾಕಿದ್ದರು. ಅಲ್ಲದೆ ಈ ವಿಒಡಿಯೋ ಹಾಕಿದ ಬಳಿಕ ನಾನು ಬದುಕುತ್ತೀನೋ ಇಲ್ಲವೋ ಗೊತ್ತಿಲ್ಲ ಆದರೆ ಈ ವಿಚಾರ ಮಾಧ್ಯಮ ಹಾಗೂ ಸರ್ಕಾರದ ಗಮನಕ್ಕೆ ಬರುವಂತೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು.
ಈ ವಿಡಿಯೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರವನ್ನು ಜನರು ಠೀಕಿಸುವುದರೊಂದಿಗೆ ಈ ಕುರಿತಾಗಿ ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು.
ಈ ವಿಚಾರದ ಕುರಿತಾಗಿ ಪ್ರತಿಕ್ರಿಯಿಸಿದ ಗಡಿ ರಕ್ಷಣಾ ಪಡೆ, ಸೇನಾಪಡೆಯ ಹಿತಕ್ಕಾಗಿ ಬಿಎಸ್‍ಎಫ್ ಹೆಚ್ಚಿನ ಒತ್ತು ನೀಡುತ್ತದೆ ಎಂದು ಹೇಳಿಕೆ ನೀಡಿದೆ. ಆದಾಗ್ಯೂ, ಯೋಧರಿಗೆ ಏನಾದರೂ ಸಮಸ್ಯೆಗಳಿದ್ದರೆ ಆ ಬಗ್ಗೆ ತನಿಖೆ ನಡೆಸಲಾಗುವುದು. ಈಗಾಗಲೇ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳು ತೇಜ್ ಅವರು ಕರ್ತವ್ಯ ನಿರ್ವಹಿಸುತ್ತಿರುವ ಪ್ರದೇಶಕ್ಕೆ ದೌಡಾಯಿಸಿದ್ದಾರೆ ಎಂದು ಪ್ರತಿಕ್ರಿಯಿಸಿದೆ.
ಇನ್ನು ಈ ವಿಡಿಯೋ ಕೇಂದ್ರ ಗೃಹ ಸಚಿವ ರಜನಾಥ್ ಸಿಂಗ್'ರವರ ಗಮನಕ್ಕೆ ಬಂದಿದೆ. ಅಲ್ಲದೆ ಈ ಕುರಿತಾಗಿ ಹೆಚ್ಚಿನ ವರದಿಯನ್ನು ಕೇಳಿರುವ ಸಚಿವರು ಯೋಧರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಕ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿಗೆ ಸೂಚನೆಯನ್ನೂ ನೀಡಿದ್ದಾರೆ.
ತನ್ನ ವಿಡಿಯೋವನ್ನು ನೋಡಿ ಪ್ರತಿಕ್ರಿಸಿರುವ ಕೇಂದ್ರ ಗೃಹಸಚಿವರಿಗೆ ಈ ಯೋಧ ಧನ್ಯವಾದ ತಿಉಳಿಸಿ.
ಇದನ್ನೂ ಓದಿ: (ವಿಡಿಯೋ) 'ನಾನು ಬದುಕುತ್ತೀನೋ ಇಲ್ಲವೋ ಗೊತ್ತಿಲ್ಲ' ಫೇಸ್'ಬುಕ್'ನಲ್ಲಿ ಹಿರಿಯ ಅಧಿಕಾರಿಗಳ ಕರಾಳ ಸತ್ಯ ಬಿಚ್ಚಿಟ್ಟ ಯೋಧ
