ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಭಾಗಿಯಾಗಿದ್ದ ಕೃಷ್ಣ ಮೃಗ ಹತ್ಯೆ ಪ್ರಕರಣದಲ್ಲಿ ಇತ್ತೀಚೆಗಷ್ಟೇ ನ್ಯಾಯಾಲಯದಿಂದ ಕ್ಲೀನ್‌ಚಿಟ್ ಪಡೆದಿದ್ದ ನಟ ಸೈಫ್ ಅಲಿ ಖಾನ್‌ಗೆ ಇದೀಗ ಕಾಡುಹಂದಿ ಬೇಟೆ ಪ್ರಕರಣದ ಸಂಕಷ್ಟ ಎದುರಾಗಿದೆ. 

ಬಲ್ಗೇರಿಯಾದಲ್ಲಿ ಕಾನೂನು ಬಾಹಿರವಾಗಿ ಕಾಡು ಹಂದಿ ಬೇಟೆಯಾಡಿದ ಪ್ರಕರಣದಲ್ಲಿ ಇಂಟರ್‌ಪೋಲ್ ಸೂಚನೆ ಅನ್ವಯ, ಮುಂಬೈ ಪೊಲೀಸರು ನಟ ಸೈಫ್ ಅಲಿ ಖಾನ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಸಾಕ್ಷಿ ರೂಪದಲ್ಲಿ ಸೈಫ್‌ರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. 

ಬಲ್ಗೇರಿಯಾದಲ್ಲಿ ಹಂದಿ ಬೇಟೆಗೆ ಸರ್ಕಾರವೇ ಅನುಮತಿ ಕೊಡುತ್ತದೆ. ಸೈಫ್ ಕೂಡಾ ಬಲ್ಗೇರಿಯಾಕ್ಕೆ ತೆರಳಿದಾಗ ಹಂದಿ  ಬೇಟೆಯಾಡಿದ್ದರು. ಅದರೆ ಈ ಸಂಬಂಧ ಸೈಫ್‌ಗೆ ನೆರವಾಗಿದ್ದ ಏಜೆಂಟ್, ಅಧಿಕೃತ ಪರವಾನಗಿ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಬಲ್ಗೇರಿಯಾ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.