ಖ್ಯಾತ ಡಿ ಜೆ ಡೇವಿಡ್ ಗುಟ್ಟಾ ಸಂಗೀತ ಕಚೇರಿಗೆ ಮುಂಬೈ ಪೊಲೀಸರು ಅನುಮತಿ ನೀಡಲು ನಿರಾಕರಿಸಿರುವುದರಿಂದ ಕಾರ್ಯಕ್ರಮ ರದ್ದಾಗಿದೆ.

ಮುಂಬೈ (ಜ.13): ಖ್ಯಾತ ಡಿ ಜೆ ಡೇವಿಡ್ ಗುಟ್ಟಾ ಸಂಗೀತ ಕಚೇರಿಗೆ ಮುಂಬೈ ಪೋಲಿಸರು ಅನುಮತಿ ನೀಡಲು ನಿರಾಕರಿಸಿರುವುದರಿಂದ ಕಾರ್ಯಕ್ರಮ ರದ್ದಾಗಿದೆ.

ಇಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ರಿಲಯನ್ಸ್ ಜಿಯೋ ಗಾರ್ಡನ್ ನಲ್ಲಿ ಡೇವಿಟ್ ಗುಟ್ಟಾ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಒಂದು ಗಂಟೆ ಮುಂಚಿತವಾಗಿ ಕಾರ್ಯಕ್ರಮ ಆರಂಭಿಸಲು ನಿಗದಿಪಡಿಸಲಾಗುತ್ತು.

ಕಾರ್ಯಕ್ರಮ ಆಯೋಜಕರು ಕಡ್ಡಾಯ ಪ್ರಕ್ರಿಯೆಗಳನ್ನು ಹಾಗೂ ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿಲ್ಲ. ಹಾಗಾಗಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಡಿಸಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.