ಕೇಂದ್ರ ಸಚಿವ ಅನಂತ್ ಕುಮಾರ್ ಅಕಾಲಿಕ ಮರಣಕ್ಕೆ ತುತ್ತಾಗಿರುವುದರಿಂದ ಅವರ ಬಳಿ ಇದ್ದ ಖಾತೆಯನ್ನು ಪ್ರಧಾನಿ ಮೋದಿ ಬೇರೆಯವರಿಗೆ ಹಂಚಿಕೆ ಮಾಡಿದ್ದಾರೆ.
ನವದೆಹಲಿ[ನ.13] ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದ ನಂತರ ಅವರ ಬಳಿ ಇದ್ದ ಖಾತೆಯನ್ನು ಬೇರೆಯವರಿಗೆ ನೀಡಲಾಗಿದೆ. ರಾಜ್ಯವನ್ನು ಪ್ರತಿನಿಧಿಸುವ ಸದಾನಂದ ಗೌಡರಿಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ನೀಡಲಾಗಿದೆ.
ಬಿಎಸ್‌ವೈ & ಅನಂತ್ ಜೋಡಿ ರಾಜ್ಯದಲ್ಲಿ ಕೇಸರಿ ಪಕ್ಷ ಕಟ್ಟಿದ ರೋಚಕ ಕಥೆ
ಅನಂತ್ ಕುಮಾರ್ ಹೊಂದಿದ್ದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಬೆಂಗಳೂರು ಉತ್ತರದ ಸಂಸದ, ಕೇಂದ್ರ ಅಂಕಿ ಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಸದಾನಂದ ಗೌಡ ಅವರಿಗೆ ನೀಡಲಾಗಿದೆ. ಅನಂತ್ ಕುಮಾರ್ ಅವರು ನಿರ್ವಹಿಸುತ್ತಿದ್ದ ಸಂಸದೀಯ ವ್ಯವಹಾರಗಳ ಖಾತೆಯನ್ನು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಗಣಿಗಾರಿಕೆ ಸಚಿವ ನರೇಂದ್ರ ಸಿಂಗ್ ಅವರಿಗೆ ನೀಡಲಾಗಿದೆ.
