ಶುಕ್ರವಾರವಷ್ಟೇ ಇಲ್ಲಿನ ಹಜ್ ಭವನದ ಕಾಂಪೌಂಡ್‌ಗೆ ಕೇಸರಿ ಬಣ್ಣ ಬಳಿದು ವಿವಾದಕ್ಕೆ ಕಾರಣವಾಗಿದ್ದ, ಉತ್ತರಪ್ರದೇಶದ ಯೋಗಿ ಸರ್ಕಾರ, ಶನಿವಾರ, ಕಾಂಪೌಂಡ್‌ಗೆ ಮತ್ತೆ ಬಿಳಿ ಬಣ್ಣ ಬಳಿದಿದೆ.

ಲಖನೌ(ಜ.07): ಶುಕ್ರವಾರವಷ್ಟೇ ಇಲ್ಲಿನ ಹಜ್ ಭವನದ ಕಾಂಪೌಂಡ್‌ಗೆ ಕೇಸರಿ ಬಣ್ಣ ಬಳಿದು ವಿವಾದಕ್ಕೆ ಕಾರಣವಾಗಿದ್ದ, ಉತ್ತರಪ್ರದೇಶದ ಯೋಗಿ ಸರ್ಕಾರ, ಶನಿವಾರ, ಕಾಂಪೌಂಡ್‌ಗೆ ಮತ್ತೆ ಬಿಳಿ ಬಣ್ಣ ಬಳಿದಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಸರ್ಕಾರದ ಅಧಿಕಾರಿಗಳು, ಗೋಡೆಗೆ ಹೆಚ್ಚುವರಿ ಬಣ್ಣ ಬಳಿದಿದ್ದು ಕೇಸರಿ ಬಣ್ಣದ ರೀತಿಯಲ್ಲಿ ಕಾಣುತ್ತಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಅದನ್ನು ಇದೀಗ ಬಿಳಿಯ ಬಣ್ಣಕ್ಕೆ ಬದಲಾಯಿಸಲಾಗಿದೆ. ಬಣ್ಣ ಹಚ್ಚುವ ಗುತ್ತಿಗೆ ಪಡೆದಿದ್ದ ವ್ಯಕ್ತಿ, ಸರ್ಕಾರದ ಸೂಚನೆಗೆ ವಿರುದ್ಧವಾಗಿ ಬಣ್ಣ ಬಳಿದು ವಿವಾದಕ್ಕೆ ಕಾರಣನಾ ಗಿದ್ದಾನೆ. ಈ ಕುರಿತು ಆತನಿಗೆ ನೋಟಿಸ್ ನೀಡಲಾಗುವುದು ಎಂದು ಹೇಳಿದ್ದಾರೆ.