ಬೆಳಗ್ಗೆ 8.30ರ ಸುಮಾರಿಗೆ ಬೈಕ್`ನಲ್ಲಿ ಮನೆಯ ಬಳಿ ಬಂದ ಯುವಕ ಮನೆಗೆ ನುಗ್ಗಿ ಏಕಾಏಕಿ ಕತ್ತು ಕತ್ತರಿಸಿ ಪರಾರಿಯಾಗಿದ್ದಾನೆ. ಆರೋಪಿಯನ್ನು ಬೇಗೂರು ರವಿ ಎಂದು ಹೇಳಲಾಗುತ್ತಿದೆ.
ಮೈಸೂರು(ನ.21): ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆಯನ್ನು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಉಪ್ಪಾರಗೆರಿಯಲ್ಲಿ ನಡೆದಿದೆ. 30 ವರ್ಷದ ಮಂಗಳ ಎಂಬ ಮಹಿಳೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಬೆಳಗ್ಗೆ 8.30ರ ಸುಮಾರಿಗೆ ಬೈಕ್`ನಲ್ಲಿ ಮನೆಯ ಬಳಿ ಬಂದ ಯುವಕ ಮನೆಗೆ ನುಗ್ಗಿ ಏಕಾಏಕಿ ಕತ್ತು ಕತ್ತರಿಸಿ ಪರಾರಿಯಾಗಿದ್ದಾನೆ. ಆರೋಪಿಯನ್ನು ಬೇಗೂರು ರವಿ ಎಂದು ಹೇಳಲಾಗುತ್ತಿದೆ.
ಪಿರಿಯಾಪಟ್ಟಣದ ಶಿವು ಎಂಬುವರನ್ನು ಮದುವೆಯಾಗಿದ್ದ ಮಂಗಳ, ರವಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಕಳೆದ ಮೂರು ತಿಂಗಳಿಂದ ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಇದ್ದ ಈಕೆ, ಕಳೆದ ಕೆಲವು ದಿನಗಳಿಂದ ಮತ್ತೆ ಗಂಡನ ಮನೆ ಸೇರಿಕೊಂಡಿದ್ದಳು. ಇದರಿಂದ ಕುಪಿತನಾದ ರವಿ ಈ ಕೃತ್ಯ ಎಸಗಿದ್ದಾನೆ. ಅಮ್ಮನ ಕೊಲೆಯನ್ನ ಕಣ್ನಾರೆ ಕಂಡ ಮಗಳು ಕೂಗಿಕೊಂಡಡಾಗ ನೆರೆಹೊರೆಯವರು ಆಗಮಿಸಿದ್ದಾರೆ. ಸ್ಥಳಕ್ಕೆ ಪಿರಿಯಾಪಟ್ಟಣ ಪೋಲಿಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.