'ಬಿಜೆಪಿ ಟಿಕೆಟ್ ಕೊಟ್ಟರೆ ಚಂದ್ರನಲ್ಲಿ ನೆಲೆಸಲು ಸಿದ್ಧ'| ಪ್ರಸಿದ್ಧ ನಿರ್ದೇಶಕ ಆಡೂರು ಗೋಪಾಲ್‌ಕೃಷ್ಣನ್ ಅಭಿಮತ| ಗುಂಪು ಹತ್ಯೆ ವಿರೋಧಿಸಿ ಪ್ರಧಾನಿಗೆ ಬರೆದ ಪತ್ರಕ್ಕೆ ಸಹಿ ಹಾಕಿದ್ದ ಆಡೂರು ಗೋಪಾಲ್‌ಕೃಷ್ಣನ್| ಆಡೂರು ಚಂದ್ರನಲ್ಲಿ ಹೋಗಿ ನೆಲೆಸಲಿ ಎಂದಿದ್ದ ಬಿಜೆಪಿ ವಕ್ತಾರ ಬಿ.ಗೋಪಾಲ್‌ಕೃಷ್ಣನ್| ಟಿಕೆಟ್ ಕೊಟ್ಟರೆ ಚಂದ್ರನಲ್ಲಿ ನೆಲೆಸುವುದಾಗಿ ಹೇಳಿದ ಆಡೂರು ಗೋಪಾಲ್‌ಕೃಷ್ಣನ್|

ತಿರುವನಂತಪುರಂ(ಜು.26): ಬಿಜೆಪಿ ಅವರು ತಮ್ಮನ್ನು ಚಂದ್ರನತ್ತ ಕಳುಹಿಸಲು ಬಯಸಿದ್ದು, ಟಿಕೆಟ್ ಬುಕ್ ಮಾಡಿ ಕೊಟ್ಟರೆ ತಾವು ಹೋಗಲು ಸಿದ್ಧವಿರುವುದಾಗಿ, ಗುಂಪು ಗಲಭೆ ತಡೆಗೆ ಆಗ್ರಹಿಸಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದವರ ಪೈಕಿ ಒಬ್ಬರಾದ ಪ್ರಸಿದ್ಧ ನಿರ್ದೇಶಕ ಆಡೂರು ಗೋಪಾಲ್‌ಕೃಷ್ಣನ್ ಹೇಳಿದ್ದಾರೆ.

ಆಡೂರು ಗೋಪಾಲ್‌ಕೃಷ್ಣನ್ ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರಕ್ಕೆ ಸಹಿ ಹಾಕಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಕೇರಳ ರಾಜ್ಯ ಬಿಜೆಪಿ ಘಟಕದ ವಕ್ತಾರ ಬಿ.ಗೋಪಾಲ್‌ಕೃಷ್ಣನ್ , ಆಡೂರು ಚಂದ್ರನಲ್ಲಿ ನೆಲೆಸುವುದು ಒಳಿತು ಎಂದು ಕಿಡಿಕಾರಿದ್ದರು.

Scroll to load tweet…

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಡೂರು ಗೋಪಾಲ್‌ಕೃಷ್ಣನ್, ತಾವು ಇಡೀ ಜಗತ್ತು ಸುತ್ತಿದ್ದು, ಬಿಜೆಪಿ ವಕ್ತಾರ ಟಿಕೆಟ್ ಕೊಡಿಸಿದರೆ ಚಂದ್ರನಲ್ಲಿ ಹೋಗಿ ನೆಲೆಸುವುದಾಗಿ ತಿರುಗೇಟು ನೀಡಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಗುಂಪು ಹತ್ಯೆ ತಡೆಗೆ ಕಠಿಣ ಕಾನೂನು ಜಾರಿಗೆ ಆಗ್ರಹಿಸಿ ವಿವಿಧ ಕ್ಷೇತ್ರಗಳ ಸುಮಾರು 49 ಗಣ್ಯರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.