ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ನಿಧನದಿಂದ ತೆರವಾಗಿರುವ ಆರ್.ಕೆ. ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಆಡಳಿತಾರೂಢ ಅಣ್ಣಾಡಿಎಂಕೆ ಪಕ್ಷವು 100 ಕೋಟಿ ರು.ಗಳನ್ನು ಮತದಾರರಿಗೆ ಹಂಚಿದೆ ಎಂದು ಡಿಎಂಕೆ ನೇತಾರ ಎಂ.ಕೆ. ಸ್ಟಾಲಿನ್ ಆರೋಪಿಸಿದ್ದಾರೆ.

ಚೆನ್ನೈ (ಡಿ.18): ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ನಿಧನದಿಂದ ತೆರವಾಗಿರುವ ಆರ್.ಕೆ. ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಆಡಳಿತಾರೂಢ ಅಣ್ಣಾಡಿಎಂಕೆ ಪಕ್ಷವು 100 ಕೋಟಿ ರು.ಗಳನ್ನು ಮತದಾರರಿಗೆ ಹಂಚಿದೆ ಎಂದು ಡಿಎಂಕೆ ನೇತಾರ ಎಂ.ಕೆ. ಸ್ಟಾಲಿನ್ ಆರೋಪಿಸಿದ್ದಾರೆ.

ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಅವರು, `ಪ್ರತಿ ಮತದಾರರಿಗೂ 6 ಸಾವಿರ ರು.ನಂತೆ ಅಣ್ಣಾ ಡಿಎಂಕೆ 100 ಕೋಟಿ ರು. ಹಂಚಿದೆ. ಈ ಬಗ್ಗೆ ಆ ಪಕ್ಷದ ಅಭ್ಯರ್ಥಿ ಮಧುಸೂದನನ್ ವಿರುದ್ಧ ಆಯೋಗ ಕ್ರಮ ಜರುಗಿಸಬೇಕು' ಎಂದು ಮನವಿ ಮಾಡಿದ್ದಾರೆ.