Asianet Suvarna News Asianet Suvarna News

ಲಕ್ನೋ ಮೆಟ್ರೋ ಕ್ರೆಡಿಟ್'ಗಾಗಿ ಯೋಗಿ, ಅಖಿಲೇಶ್ ಟ್ವಿಟರ್ ವಾರ್

ಇಂದು ಚಾಲನೆ ನೀಡಿದ ಲಕ್ನೋ ಮೆಟ್ರೋ ಕ್ರೆಡಿಟ್’ಗಾಗಿ ಉತ್ತರ ಪ್ರದೇಶ ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್  ಟ್ವಿಟರ್ ವಾರ್’ನಲ್ಲಿ ಬ್ಯುಸಿಯಾಗಿದ್ದಾರೆ.

Adityanath Akhilesh engage in Twitter war over credit for Lucknow Metro

ನವದೆಹಲಿ (ಸೆ.05): ಇಂದು ಚಾಲನೆ ನೀಡಿದ ಲಕ್ನೋ ಮೆಟ್ರೋ ಕ್ರೆಡಿಟ್’ಗಾಗಿ ಉತ್ತರ ಪ್ರದೇಶ ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್  ಟ್ವಿಟರ್ ವಾರ್’ನಲ್ಲಿ ಬ್ಯುಸಿಯಾಗಿದ್ದಾರೆ.

ಅಖಿಲೇಶ್ ಯಾದವ್ ಈಗಾಗಲೇ ಹಸಿರು ನಿಶಾನೆ ತೋರಿಸಿರುವ ಮೆಟ್ರೋ ಯೋಜನೆಯನ್ನು ಯೋಗಿ ಆದಿತ್ಯನಾಥ್ ಇಂದು ಉದ್ಘಾಟಿಸಿದ್ದಾರೆ ಎಂದು ಸಮಾಜವಾದಿ ಪಕ್ಷ ಹೇಳಿದೆ.

ಯೋಗಿ ಆದಿತ್ಯನಾಥ್ ತಮ್ಮ ಟ್ಟಿಟರ್’ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ನಿಮ್ಮ ಕನಸು ಕಡೆಗೂ ನನಸಾಗಿದೆ. ಈ ಮೆಟ್ರೋ ನಿಮ್ಮದು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನಿಮಗೆ ಇದು ಉಡುಗೊರೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಟ್ರಾನ್ಸ್’ಪೋರ್ಟ್ ನಗರದಿಂದ ಚಾರ್ಬಾಗ್’ಗೆ ಮೊದಲ ಹಂತದ ಮೆಟ್ರೋಗೆ ಇಂದು ಚಾಲನೆ ನೀಡಿದ್ದಾರೆ. ನಾಳೆಯಿಂದ ಮೆಟ್ರೋ ಸೌಲಭ್ಯ ಸಾರ್ವಜನಿಕರಿಗೆ ಲಭ್ಯವಾಗಲಿದೆ. 2019 ರೊಳಗೆ ಎರಡನೇ ಹಂತದ ಮೆಟ್ರೋ  ಕಾಮಗಾರಿಯನ್ನು ಪೂರ್ಣಗೊಳಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ದಟ್ಟಣೆ ಮುಕ್ತ, ಕಡಿಮೆ ವೆಚ್ಚದ ಹಾಗೂ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಯಾವಾಗಲೂ ಬೆಂಬಲ ನೀಡುತ್ತಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಅಖಿಲೇಶ್ ಯಾದವ್ ಸರಣಿ ಟ್ವೀಟ್’ಗಳನ್ನು ಮಾಡಿದ್ದು, ತಂಡದ ಸದಸ್ಯರು, ಅಧಿಕಾರಿಗಳ ಜೊತೆ ಲಕ್ನೋ ನೆಟ್ರೋದಲ್ಲಿರುವ ಪೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಮೆಟ್ರೋ ಎಂಜಿನ್ ಈಗಾಗಲೇ ಓಡುತ್ತಿದ್ದು ಬೋಗಿಗಳನ್ನು ಮಾತ್ರ ಈಗ ಸೇರಿಸಲಾಗಿದೆ ಎಂದು ತಾವು ಮುಖ್ಯಮಂತ್ರಿಯಾಗಿದ್ದಾಗ ಉದ್ಘಾಟನೆಗೊಂಡುವ ಮೆಟ್ರೋ ಯೋಜನೆ ಫೊಟೋವನ್ನು ಹಾಕಿದ್ದಾರೆ. ಅದರ ಕ್ರೆಡಿಟ್ ನಮಗೆ ಸೇರಬೇಕೆಂದು ಹೇಳಿದ್ದಾರೆ.

 

 

 

 

 

 

 

 

 

 

 

 

 

Latest Videos
Follow Us:
Download App:
  • android
  • ios