ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಡಿ.೩೧ರೊಳಗೆ ಜೋಡಣೆ ಮಾಡುವುದು ಕಡ್ಡಾಯವಲ್ಲ ಎಂದು ಆರ್‌'ಬಿಐ ಹೇಳಿದೆ ಎಂಬ ವರದಿಗಳನ್ನು ಸ್ವತಃ ಆರ್‌ಬಿಐ ನಿರಾಕರಿಸಿದೆ. ಅಕ್ರಮ ಹಣ ವರ್ಗಾವಣೆ ನಿಯಮಗಳಡಿ ಬ್ಯಾಂಕ್ ಖಾತೆ ಜತೆ ಆಧಾರ್ ಜೋಡಣೆ ಕಡ್ಡಾಯ ಎಂದು ಹೇಳಿದೆ.
ನವದೆಹಲಿ/ಮುಂಬೈ(ಅ.22): ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಡಿ.೩೧ರೊಳಗೆ ಜೋಡಣೆ ಮಾಡುವುದು ಕಡ್ಡಾಯವಲ್ಲ ಎಂದು ಆರ್'ಬಿಐ ಹೇಳಿದೆ ಎಂಬ ವರದಿಗಳನ್ನು ಸ್ವತಃ ಆರ್ಬಿಐ ನಿರಾಕರಿಸಿದೆ. ಅಕ್ರಮ ಹಣ ವರ್ಗಾವಣೆ ನಿಯಮಗಳಡಿ ಬ್ಯಾಂಕ್ ಖಾತೆ ಜತೆ ಆಧಾರ್ ಜೋಡಣೆ ಕಡ್ಡಾಯ ಎಂದು ಹೇಳಿದೆ.
ಬ್ಯಾಂಕ್ ಖಾತೆ ಜತೆ ಆಧಾರ್ ಜೋಡಿಸುವ ಕುರಿತಂತೆ ಬ್ಯಾಂಕುಗಳಿಗೆ ತಾನು ಯಾವುದೇ ಸೂಚನೆ ನೀಡಿಲ್ಲ ಎಂದು ಆರ್ಟಿಐನಡಿ ಕೇಳಲಾದ ಪ್ರಶ್ನೆಗೆ ಆರ್ಬಿಐ ನೀಡಿದ್ದ ಉತ್ತರ ಭಾರಿ ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಶನಿವಾರ ಆರ್ ಬಿಐ ಸ್ಪಷ್ಟನೆ ನೀಡಿದೆ. ಆದಾಗ್ಯೂ ಒಂದು ಹಣಕಾಸು ವರ್ಷದಲ್ಲಿ 1 ಲಕ್ಷ ರು.ಗಿಂತ ಹೆಚ್ಚು ಹಣವನ್ನು ಖಾತೆಗೆ ಜಮೆ ಮಾಡದ, ತಿಂಗಳಿಗೆ 10 ಸಾವಿರ ರು.ಗಿಂತ ಹೆಚ್ಚು ಹಣ ಜಮೆ ಮಾಡದ ಹಾಗೂ ಹಿಂಪಡೆಯದ ಖಾತೆಗಳಿಗೆ ವಿನಾಯಿತಿ ಇದೆ ಎಂದು ವರದಿಗಳು ತಿಳಿಸಿವೆ.
ಈ ನಡುವೆ ಆಧಾರ್ ವಿಷಯ ಕೋರ್ಟ್ನಲ್ಲಿರುವುದರಿಂದ ತಕ್ಷಣಕ್ಕೆ ಈ ವಿಷಯದಲ್ಲಿ ಮುಂದುವರೆಯದಂತೆ ಬ್ಯಾಂಕಿಂಗ್ ನೌಕರರ ಸಂಘಟನೆ ಮನವಿ ಮಾಡಿದೆ
