ಇಷ್ಟು ದಿನ ಕೇವಲ ರೌಡಿ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿತ್ತು. ಇನ್ನು ಮುಂದೆ ಅಕ್ರಮ ಆಸ್ತಿಗಳ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುವುದು

ಬೆಂಗಳೂರು(ಫೆ.08): ಗುಂಪು ಕಟ್ಟಿಕೊಂಡಿದ್ದರೆ ರೌಡಿ, ಒಂಟಿಯಾಗಿದ್ದರೆ ಪುಕ್ಕಲ. ಹೀಗಂತ ಹೇಳಿದ್ದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್. ಬೆಂಗಳೂರಿನಲ್ಲಿ ಮಾತನಾಡಿದ ಅವರು ಭೂ ಮಾಫಿಯಾ, ಗಾರ್ಬೇಜ್ ಮಾಫಿಯಾದಂತಹ ಸಂಬಂಧವಿಲ್ಲದ ವಿಚಾರಗಳ ಬಗ್ಗೆ ತಲೆಹಾಕಿದರೆ ಹೆಡೆಮುರಿ ಕಟ್ಟಲಾಗುವುದು ಅಂತ ಎಚ್ಚರಿಕೆ ನೀಡಿದರು.

ಸಾರ್ವಜನಿಕರ ಹಿತಾಸಕ್ತಿ ಕಾಪಾಡುವುದು ನಮ್ಮ ಹೊಣೆ. ಕಾನೂನು ಸುವ್ಯವಸ್ಥೆ ವಿರುದ್ಧವಾಗಿ ನಡೆದರೆ ಸುಮ್ಮನೆ ಬಿಡುವುದಿಲ್ಲ. ಇಷ್ಟು ದಿನ ಕೇವಲ ರೌಡಿ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿತ್ತು. ಇನ್ನು ಮುಂದೆ ಅಕ್ರಮ ಆಸ್ತಿಗಳ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುವುದು ಅಂತ ಖಡಕ್​ ವಾರ್ನಿಂಗ್​ ನೀಡಿದ್ದಾರೆ.

ಯಾವುದೇ ಕಾರಣಕ್ಕೂ ರೌಡಿಗಳಿಗೆ ಹೆದರಬೇಡಿ. ರೌಡಿಗಳ ಬೆದರಿಕೆಗೆ ಸಾರ್ವಜನಿಕರು ಹೆದರಬಾರದು. ಬೆದರಿಕೆ ಹಾಕಿದರೆ ದೂರು ನೀಡಿ. ಅಂತಹ ರೌಡಿಗಳ ವಿರುದ್ಧ ಕೂಡಲೇ ಕ್ರಮ ಜರುಗಿಸುತ್ತೇವೆ. ರೌಡಿಗಳ ಅಕ್ರಮ ಸಂಪಾದನೆಯ ಮೂಲ ಪತ್ತೆ ಮಾಡುತ್ತೇವೆ. ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಯಾರನ್ನೂ ಬಿಡಲ್ಲ. ಕ್ರೈಂನಲ್ಲಿ ಭಾಗಿಯಾಗಿದ್ದರೆ ಕಠಿಣ ಕ್ರಮಕ್ಕೆ ಸೂಚನೆ. ಹೆಚ್ಚುವರಿ ಪೊಲೀಸ್​ ಆಯುಕ್ತ ಹೇಮಂತ್​ ನಿಂಬಾಳ್ಕರ್​ ಹೇಳಿಕೆ