ಟಿಡಿಬಿ ಆಡಳಿತ ನಡೆಸುತ್ತಿರುವ ಕೇರಳದ ದೇವಸ್ಥಾನವೊಂದಕ್ಕೆ 6 ಮಂದಿ ದಲಿತರನ್ನು ಪೂಜಾರಿಗಳಾಗಿ ನೇಮಕ ಮಾಡಿಕೊಳ್ಳಲು ಶಿಫಾರಸ್ಸು ಮಾಡಲಾಗಿದೆ. ಒಟ್ಟು 36 ಮಂದಿ ಬ್ರಾಹ್ಮಣೇತರರಲ್ಲಿ 6 ಮಂದಿ ದಲಿತರನ್ನು ಶಿಫಾರಸ್ಸು ಮಾಡಲಾಗಿದೆ.

ತಿರುವನಂತಪುರಂ (ಅ.06): ಟಿಡಿಬಿ ಆಡಳಿತ ನಡೆಸುತ್ತಿರುವ ಕೇರಳದ ದೇವಸ್ಥಾನವೊಂದಕ್ಕೆ 6 ಮಂದಿ ದಲಿತರನ್ನು ಪೂಜಾರಿಗಳಾಗಿ ನೇಮಕ ಮಾಡಿಕೊಳ್ಳಲು ಶಿಫಾರಸ್ಸು ಮಾಡಲಾಗಿದೆ. ಒಟ್ಟು 36 ಮಂದಿ ಬ್ರಾಹ್ಮಣೇತರರಲ್ಲಿ 6 ಮಂದಿ ದಲಿತರನ್ನು ಶಿಫಾರಸ್ಸು ಮಾಡಲಾಗಿದೆ.

ತಿರುವಾಂಕೂರು ದೇವಸ್ಥಾನ ಮಂಡಳಿ 6 ಮಂದಿ ದಲಿತರನ್ನು ಪೂಜಾರಿಗಳಾಗಿ ಶಿಫಾರಸ್ಸು ಮಾಡಿದೆ. ಸಾರ್ವಜನಿಕ ಸೇವಾ ಆಯೋಗವು ಅಲ್ಪಾವಧಿ ಪೂಜಾರಿಗಳ ನೇಮಕಾತಿಗೆ ಕರೆದಿತ್ತು. ಲಿಖಿತ ಪರೀಕ್ಷೆ ಹಾಗೂ ಸಂದರ್ಶನವನ್ನು ನಡೆಸಲಾಗಿತ್ತು. ಅದಕ್ಕೆ 36 ಮಂದಿ ಬ್ರಾಹ್ಮಣರೇತರಲ್ಲಿ 6 ಮಂದಿ ದಲಿತರನ್ನು ಶಿಫಾರಸ್ಸು ಮಾಡಲಾಗಿದೆ.

ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ. ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ. ಮೀಸಲಾತಿ ಆಧಾರದ ಮೇಲೆ ದಲಿತರಿಗೂ ಅವಕಾಶ ನೀಡಲಾಗಿದೆ ಎಂದು ಮುಜರಾಯಿ ಸಚಿವ ಕದಂಕಪಲ್ಲಿ ರಾಮಚಂದ್ರನ್ ಸ್ಪಷ್ಟಪಡಿಸಿದ್ದಾರೆ.