ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ತೆಗ್ಗಿ ಗ್ರಾಮದ ಶ್ರೀಶೈಲ್ ಎಂಬುವಾತನೇ ಆ ಯುವಕ. ಕುಮಾರಸ್ವಾಮಿಯವರ ಸಮ್ಮುಖದಲ್ಲೇ ಮದುವೆಯಾಗುವುದಾಗಿ ಒಂದು ವರ್ಷದಿಂದ ಹಠ ಹಿಡಿದು ಕುಳಿತಿದ್ದ.

ಬಾಗಲಕೋಟೆ: ಮದುವೆಯಾಗಬೇಕಿದ್ದ ಯುವಕನೊಬ್ಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಂದು ಆಶೀರ್ವದಿಸುವ ತನಕ ತಾಳಿಕಟ್ಟುವುದಿಲ್ಲ ಎಂದು ಹಠ ಹಿಡಿದು ಕುಳಿತ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

 ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ತೆಗ್ಗಿ ಗ್ರಾಮದ ಶ್ರೀಶೈಲ್ ಎಂಬುವಾತನೇ ಆ ಯುವಕ. ಕುಮಾರಸ್ವಾಮಿಯವರ ಸಮ್ಮುಖದಲ್ಲೇ ಮದುವೆಯಾಗುವುದಾಗಿ ಒಂದು ವರ್ಷದಿಂದ ಹಠ ಹಿಡಿದು ಕುಳಿತಿದ್ದ. ಇದೀಗ ಸ್ವತಃ ಕುಮಾರಸ್ವಾಮಿಯವರೇ ತೆರಳಿದ ಮೇಲೆ ವಧುವಿಗೆ ತಾಳಿ ಕಟ್ಟಿದ್ದಾನೆ.

ಗ್ರಾಮದ ಸೋಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಮದುವೆಗೆ ಹೆಚ್ ಡಿಕೆ ಖುದ್ದಾಗಿ ಹಾಜರಿದ್ದು ನೂತನ ವಧುವರರನ್ನು ಆಶೀರ್ವದಿಸಿ ಬಂದಿದ್ದಾರೆ.