ಬೆಂಗಳೂರು(ಸೆ.17): 'ಇಂತಿ ನಿನ್ನ ಪ್ರೀತಿಯ' ಸಿನಿಮಾ ಮೂಲಕ ಪ್ರಸಿದ್ಧರಾದ ಚಿತ್ರ ನಟಿ ಸೋನು ಗೌಡ, ಲೈಂಗಿಕ ಹಗರಣಕ್ಕೆ ಸಂಭಂದಪಟ್ಟಂತೆ ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿ ಸ್ಪಷ್ಟನೆಯನ್ನು ನೀಡಿದ್ದಾರೆ.
ಪ್ರಕರಣದ ಕುರಿತಾಗಿ ಮಾತನಾಡಿರುವ ನಟಿ ಸೋನು ಗೌಡ 'ಯಾರೋ ಒಬ್ಬರು ಯಶಸ್ಸು ಗಳಿಸಿದಾಗ ಅವರ ಹೆಸರನ್ನು ಹಾಳು ಮಾಡುವವರು ಬಹಳಷ್ಟು ಮಂದಿ ಇರುತ್ತಾರೆ. ಕಿಡಿಗೇಡಿಯೊಬ್ಬ ನನ್ನ ಭವಿಷ್ಯವನ್ನು ಹಾಳು ಮಾಡುವುದಕ್ಕಾಗಿ ಇ-ಮೇಲ್ ಅಕೌಂಟ್ ಹ್ಯಾಕ್ ಮಾಡಿ ಇಂತಹ ಕೃತ್ಯ ಎಸಗಿದ್ದಾನೆ. ಈ ಕುರಿತಾಗಿ ನಾನು 4 ದಿನಗಳ ಹಿಂದೆಯೇ ಫೋಟೋ ವೈರಲ್ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ದೂರು ನೀಡಿದ್ದೇನೆ' ಎಂದಿದ್ದಾರೆ.
