ಪರಿಸ್ಥಿತಿ ಕೈ ಮೀರುತ್ತಿದ್ದು, ಮತ್ತೆ ಈ ನಟಿ ತನ್ನ ಪತಿಯೊಂದಿಗೆ ಬಾಳಲು ನಿರ್ಧರಿಸಿದ್ದಾರೆ. ಇದೇ ನಿಟ್ಟಿನಲ್ಲಿ ತನ್ನ ವೈವಾಹಿಕ ಸಂಬಂಧ ಉಳಿಸಿಕೊಳ್ಳಲು ಕೋರ್ಟ್ ಮೆಟ್ಟಿಲೇರಿದ್ದಾರೆ.
ಪಂಚಭಾಷಾ ಸಿನಿಮಾಗಳಲ್ಲಿ ನಟಿಸಿದ ಖ್ಯಾತ ನಟಿ ರಂಭಾ ಈಗ ತನ್ನ ವೈವಾಹಿಹ ಜೀವನವನ್ನು ಉಳಿಸಿಕೊಳ್ಳಲು ಕೋರ್ಟ್ ಮೆಟ್ಟಿಲೇರಿದ್ದಾರೆ.
1992 ರಿಂದ ಈವರೆಗೆ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ನಟಿ ರಂಭಾ, 2010ರ ಏಪ್ರಿಲ್'ನಲ್ಲಿ ಕೆನಡಾ ಮೂಲದ ಉದ್ಯಮಿ ಇಂದ್ರನ್ ಪದ್ಮನಾಥನ್ ಅವರೊಂದಿಗೆ ವಿವಾಹ ಬಂಧನಕ್ಕೊಳಗಾಗಿದ್ದರು. ಬಳಿಕ ಅಲ್ಲೇ ನೆಲೆಸಿದ್ದ ರಂಭಾ ಚಿತ್ರರಂಗದಿಂದ ದೂರವುಳಿದ್ದಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಆದರೆ ಕಲವು ತಿಂಗಳ ಹಿಂದೆ ಕೆಲವೊಂದು ವೈಯುಕ್ತಿಕ ಕಾರಣಗಳಿಂದ ಇವರ ಮಧ್ಯೆ ಬಿರುಕು ಮೂಡಿದ್ದು, ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ರಂಭಾ ತನ್ನ ಪತಿ ಪದ್ಮನಾಥನ್ ತನ್ನ ಬಳಿ ಹಿಂತಿರುಗಬಹುದೆಂದು ಭಾವಿಸಿದ್ದರು. ಇದೀಗ ಪರಿಸ್ಥಿತಿ ಕೈ ಮೀರುತ್ತಿದ್ದು, ಮತ್ತೆ ಈ ನಟಿ ತನ್ನ ಪತಿಯೊಂದಿಗೆ ಬಾಳಲು ನಿರ್ಧರಿಸಿದ್ದಾರೆ. ಇದೇ ನಿಟ್ಟಿನಲ್ಲಿ ತನ್ನ ವೈವಾಹಿಕ ಸಂಬಂಧ ಉಳಿಸಿಕೊಳ್ಳಲು ಕೋರ್ಟ್ ಮೆಟ್ಟಿಲೇರಿದ್ದಾರೆ.
