ಮದುವೆ ಆದ್ರೆ ಅವಕಾಶ ತಪ್ಪುತ್ತೆಂದು ನಟಿಯರು, ಮದುವೆಯಾಗೋದನ್ನೇ ಮುಂದೂಡುತ್ತಾರೆ. ಆದರೆ ಬಾಂಗ್ಲಾದೇಶದ ಖ್ಯಾತ ನಟಿಯೊಬ್ಬರು ತನ್ನ ಪತಿಯ ವೃತ್ತಿ ಜೀವನ ಕಾಪಾಡಲೆಂದು 9 ವರ್ಷಗಳವರೆಗೆ ತನ್ನ ಮದುವೆ ವಿಷಯ ರಹಸ್ಯವಾಗಿಟ್ಟುಕೊಂಡಿದ್ದ ವಿಷಯ ಇದೀಗ ಬಹಿರಂಗ ವಾಗಿದೆ.

ನಟಿ ಅಪು ಬಿಸ್ವಾಸ್‌, ನಟ ಶಾಕಿಬ್‌ರನ್ನು 9 ವರ್ಷಗಳ ಹಿಂದೆ ವಿವಾಹ ವಾಗಿದ್ದರಂತೆ. ಆದರೆ ನಟನ ವೃತ್ತಿ ಜೀವನದ ಹಿತಾಸಕ್ತಿಗಾಗಿ ಅದನ್ನು ಮುಚ್ಚಿಡಲಾಗಿತ್ತು. ಇದೀಗ ನಟನಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಬಿಸ್ವಾಸ್‌ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.