ನೇಣು ಬಿಗಿದುಕೊಂಡು ನಟಿ ಆತ್ಮಹತ್ಯೆಗೆ ಶರಣು

First Published 24, May 2018, 2:26 PM IST
Actress Dhanya commit suicide
Highlights

ಪ್ರಿಯಕರನ ಕಿರುಕುಳ ಹಿನ್ನೆಲೆಯಲ್ಲಿ ಬೇಸತ್ತು ಮಾಡೆಲ್ ಹಾಗೂ ನಟಿಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. 

ಮೈಸೂರು : ಪ್ರಿಯಕರನ ಕಿರುಕುಳ ಹಿನ್ನೆಲೆಯಲ್ಲಿ ಬೇಸತ್ತು ಮಾಡೆಲ್ ಕಮ್ ನಟಿಯೋರ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಇನ್ನಷ್ಟೇ ಬಿಡುಗಡೆಯಾಗಬೇಕಿರುವ ಭರವಸೆ ಎಂಬ ಚಿತ್ರದಲ್ಲಿ ನಟಿಸಿದ್ದ ಧನ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  

ಮೈಸೂರಿನ ಬೆಳವಾಡಿ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ  ಡೆತ್ ನೋಟು ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. 

19 ವರ್ಷದ ಮಾಡೆಲ್ ಧನ್ಯ  ಡೆತ್ ನೋಟ್ ನಲ್ಲಿ ಆಕೆಯ  ಪ್ರಿಯಕರ ದೀನ್ ಎಂಬಾತನ ಹೆಸರು ಪ್ರಸ್ತಾಪ ಮಾಡಿದ್ದು, ತನ್ನನ್ನು ಡಗಾರ್ ಎಂದು ಕರೆದಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿದ್ದು, ತಾನು ಅಂತಹ ನಡವಳಿಕೆಯವಳಲ್ಲ ಎಂದು ಬರೆದಿಟ್ಟಿದ್ದಾರೆ. 

ಈಗಾಗಲೇ ಧನ್ಯ  ಅಮ್ಮ ಸೇರಿದಂತೆ ಎರಡು ಕಿರುಚಿತ್ರದಲ್ಲಿ ನಟಿಸಿದ್ದು, ಇನ್ನೊಂದು ಚಿತ್ರ ಭರವಸೆ ಬಿಡುಗಡೆಯಾಗಬೇಕಿದೆ. 

loader