ಇಂದು ನಟಿ ಭಾವನಾ-ನವೀನ್ ವಿವಾಹ

news | Monday, January 22nd, 2018
Suvarna Web Desk
Highlights

ಬಹುಭಾಷಾ ನಟಿ ಭಾವನಾ ಮತ್ತು ಸ್ಯಾಂಡಲ್‌ವುಡ್ ಚಿತ್ರ ನಿರ್ಮಾಪಕ ನವೀನ್ ಅವರು ಸೋಮವಾರ ನವ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ತ್ರಿಶೂರ್: ಬಹುಭಾಷಾ ನಟಿ ಭಾವನಾ ಮತ್ತು ಸ್ಯಾಂಡಲ್‌ವುಡ್ ಚಿತ್ರ ನಿರ್ಮಾಪಕ ನವೀನ್ ಅವರು ಸೋಮವಾರ ನವ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕೇರಳದ ತ್ರಿಶೂರ್ ಜಿಲ್ಲೆಯ ಕೋವಿಲಕಥಂ ಪದಮ್ ಕನ್ವೆಷನ್ ಕೇಂದ್ರದಲ್ಲಿ ನಡೆಯಲಿರುವ ವಿವಾಹದಲ್ಲಿ ಎರಡೂ ಕುಟುಂಬಸ್ಥರ ಸದಸ್ಯರು ಮತ್ತು ಆಪ್ತ ಸ್ನೇಹಿತ ವರ್ಗದವರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ತಿಳಿದುಬಂದಿದೆ.

 ಅಲ್ಲದೆ, ಇಂದು ಸಂಜೆಯೇ ಲುಲು ಕನ್ವೆಷನ್ ಸೆಂಟರ್‌ನಲ್ಲಿ ನಿಗದಿಯಾಗಿರುವ ಆರತಕ್ಷತೆ ಕಾರ್ಯಕ್ರಮದಲ್ಲಿ ಚಿತ್ರೋದ್ಯಮದವರು ಮತ್ತು ಇತರ ವಿಐಪಿಗಳು ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.

ನಟಿ ಭಾವನಾ ಮತ್ತು ನಿರ್ಮಾಪಕ ನವೀನ್ ಅವರ ನಿಶ್ಚಿತಾರ್ಥ ಕಳೆದ ವರ್ಷದ ಮಾರ್ಚ್‌ನಲ್ಲೇ ನೆರವೇರಿತ್ತು. ಅವರ ದಿಬ್ಬಣ ಕಳೆದ ವರ್ಷದ ಅಕ್ಟೋಬರ್‌ನಲ್ಲೇ ನೆರವೇರಬೇಕಿತ್ತಾದರೂ, ಅವರ ವೈಯಕ್ತಿಕ ಜೀವನದಲ್ಲಿ ಆದ ಕೆಲ ಸಮಸ್ಯೆಗಳ ಕಾರಣಕ್ಕಾಗಿ ಮುಂದೂಡಲಾಗಿತ್ತು.

Comments 0
Add Comment

    ಮಾಮಾ ಎಂದಾಕ್ಷಣ ನಮಗಿರುವ ಭಾವನೆಯೇ ಬೇರೆ, ನಿಜವಾದ ಅರ್ಥ?

    entertainment | Friday, May 11th, 2018