ಖಾಸಗಿ ಕಂಪನಿ ನೌಕರನೊಬ್ಬ ನಟಿಯೊಬ್ಬಳನ್ನು ಮದುವೆಯಾಗಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಂಚನೆಗೊಳಗಾದ ನಟಿ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರು: ಖಾಸಗಿ ಕಂಪನಿ ನೌಕರನೊಬ್ಬ ನಟಿಯೊಬ್ಬಳನ್ನು ಮದುವೆಯಾಗಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಂಚನೆಗೊಳಗಾದ ನಟಿ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳೆದೊಂದು ವರ್ಷದಿಂದ ಖಾಸಗಿ ಕಂಪನಿ ನೌಕರ ಉಲ್ಲಾಸ್ ಪಟೇಲ್ ಎಂಬಾತ ನಟಿಯೊಂದಿಗೆ ಸ್ನೇಹ ಹೊಂದಿದ್ದು, ಅವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. 2 ತಿಂಗಳುಗಳಿಂದ ನಟಿ ಹಾಗೂ ಉಲ್ಲಾಸ್ ಲೀವಿಂಗ್ ಟುಗೆದರ್ನಲ್ಲಿದ್ದರು.
ಜೂನ್ 3ರಂದು ನಟಿ ತನ್ನ ಮನೆ ಮೈಸೂರಿಗೆ ತೆರಳಿ ವಾಪಸ್ ಬರುವಷ್ಟರಲ್ಲಿ ಉಲ್ಲಾಸ್ ನಾಪತ್ತೆಯಾಗಿದ್ದಾನೆ. ಮೊಬೈಲ್ ಮುಖಾಂತರ ಉಲ್ಲಾಸ್'ನನ್ನು ಸಂಪರ್ಕಿಸಿದಾಗ ಮದುವೆಗೆ ಪೋಷಕರು ಒಪ್ಪುತ್ತಿಲ್ಲ ಎಂದು ಉಲ್ಲಾಸ್ ಹೇಳಿದ್ದಾನೆ.
ಜತೆಗೆ ಉಲ್ಲಾಸ್ ತಾಯಿ ಕೂಡಾ ನಟಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆನ್ನಲಾಗಿದೆ. ಜೂನ್ 2ರಂದು ಉಲ್ಲಾಸ್ ಹಾಗೂ ಆತನ ಸ್ನೇಹಿತ ಪ್ರೀತಂ ನಟಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾಳೆ.
ಸದ್ಯ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಉಲ್ಲಾಸ್ ವಿರುದ್ಧ ಅತ್ಯಾಚಾರ, ವಂಚನೆ ದೂರು ದಾಖಲಾಗಿದೆ. ಆದರೆ ತನಗೆ ನ್ಯಾಯ ಸಿಕ್ಕಿಲ್ಲ, ಹಾಗೂ ತನ್ನನ್ನು ಪೊಲೀಸರು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.
ಪೊಲೀಸ್ ಆಯುಕ್ತರ ಕಚೇರಿಗೆ ದೂರು ನೀಡಲು ಹೋದ್ರು ಎಲ್ಲರ ಮುಂದೆ ನನಗೆ ಅವಮಾನ ಮಾಡಿದ್ದಾರೆ, ಅಲ್ಲೂ ಪೊಲೀಸರು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ನಟಿ ಆರೋಪಿಸಿದ್ದಾಳೆ.
