ಇಲ್ಲಿನ ಸೂರ್ಯಕಮಲ ಕಲ್ಯಾಣ ಮಂಟಪದಲ್ಲಿ ಪ್ರಾತಃಕಾಲದ ಮುಹೂರ್ತದಲ್ಲಿ ಮಹೇಶ್ ಸ್ವಾತಿ ನವ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಲೂಸ್ ಮಾದ ಎಂದೇ ಗುರುತಿಸಲ್ಪಡುವ ಸ್ಯಾಂಡಲ್​ವುಡ್ ನಟ ಯೋಗಿ ಸಹೋದರ ಮಹೇಶ್ ಮದುವೆ ದಕ್ಷಿಣ ಕನ್ನಡದ ಧರ್ಮಸ್ಥಳದಲ್ಲಿ ನಡೆಯಿತು. ಇಲ್ಲಿನ ಸೂರ್ಯಕಮಲ ಕಲ್ಯಾಣ ಮಂಟಪದಲ್ಲಿ ಪ್ರಾತಃಕಾಲದ ಮುಹೂರ್ತದಲ್ಲಿ ಮಹೇಶ್ ಸ್ವಾತಿ ನವ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಹಿರಿಯ ನಟಿ ಅಂಬುಜಾಕ್ಷಿ ತನ್ನ ಪುತ್ರನ ವಿವಾಹ ಧರ್ಮಸ್ಥಳದ ಪುಣ್ಯ ಕ್ಷೇತ್ರದಲ್ಲಿ ನಡೆದಿರುವುದಕ್ಕೆ ಸಂತಸ ಪಟ್ಟರು. ತನ್ನ ಮಕ್ಕಳು ಧರ್ಮಸ್ಥಳದಲ್ಲೇ ಮದುವೆ ಆಗಬೇಕು ಎಂಬುದು ನನ್ನ ಇಚ್ಛೆಯಾಗಿತ್ತು. ಅದರಂತೆ ಹಿರಿಯ ಪುತ್ರ ಮಹೇಶ್​ನ ಮದುವೆ ನೆರವೇರಿದೆ ಎಂದು ಖುಷಿಯಿಂದಲೇ ಹೇಳಿದರು.