ಬೆಂಗಳೂರು (ಸೆ,20): ಕಾವೇರಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ಸಂಬಂಧಿಸಿ ನಟ ಹಾಗೂ ಬಿಜೆಪಿ ನಾಯಕ ಜಗ್ಗೇಶ್ ತಕ್ಕಡಿಯಲ್ಲಿ ತೂತಿದೆ ಎಂ ಟ್ವೀಟರ್ ಮೂಲಕ ತೀವ್ರ ಆಕ್ರೋಶ ಪಡಿಸಿದ್ದಾರೆ.
ಕಲಿಯುಗದಲ್ಲಿ ಅನ್ಯಾಯವೇ ರಾಜ, ಹಾದರವೇ ಮಂತ್ರಿ, ಕಳ್ಳಕಾಕರೇ ಸೇನಾಧಿಪತಿಗಳು, ನ್ಯಾಯ ಹಳ್ಳದ ಕಡೆ, ಅನ್ಯಾಯ ಸುಪತ್ತಿನಕಡೆ; ಸತ್ಯವಂತ ಸುಡುಗಾಡಿಗೆ, ಅಸತ್ಯವಂತ ಲೋಕಪೂಜಿತ ಎಂದು ಜಗ್ಗೇಶ್ ಟ್ವೀಟಿಸಿದ್ದಾರೆ.
ಮುಂದುವರೆದು, ನ್ಯಾಯಾಂಗ ಸಂವಿಧಾನದ ಕಂದ..ಸಂವಿಧಾನದಲ್ಲಿ ಎಲ್ಲರು ಸಮಾನರು..ಆದರು ನ್ಯಾಯಾಂಗ ಒಂದು ಕಣ್ಣಿಗೆಚಿಕಿತ್ಸೆ ಇನ್ನೊಂದುಕಣ್ಣಿಗೆ ಊನಮಾಡಿ!!ನೊಂದ ಮನಕ್ಕೆ ಮತ್ತೆ ಬರೆಹಾಕಿತು!! ಎಂದು ಜಗ್ಗೇಶ್ ಅಸಮಧಾನ ವ್ಯಕ್ತಪಡಿಸಿದಿದ್ದಾರೆ.
