ಟಾಲಿವುಡ್ ಸ್ಟೈಲಿಷ್ ಸ್ಟಾರ್ ರಾಮ್ ಚರಣ್ ತೇಜಾ ತಿರುಮಲ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

ಬೆಂಗಳೂರು (ಡಿ.04): ಟಾಲಿವುಡ್ ಸ್ಟೈಲಿಷ್ ಸ್ಟಾರ್ ರಾಮ್ ಚರಣ್ ತೇಜಾ ತಿರುಮಲ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

Add Asianetnews Kannada as a Preferred SourcegooglePreferred

ಧೃವಾ ಸಿನಿಮಾ ನಂತರ ರಾಮ್ ಚರಣ್ ತೇಜಾ ಅಭಿನಯಿಸುತ್ತಿರುವ ಬಹು ನೀರಿಕ್ಷೆಯ ಸಿನಿಮಾ ರಂಗಸ್ಥಳಂ. ಈ ಸಿನಿಮಾ ಯಶಸ್ಸಿಗೆ ರಾಮ್ ಚರಣ್ ತೇಜಾ ಹಾಗೂ ಪತ್ನಿ ಉಪಾಸನ ತಿರುಪತಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇನ್ನು ಬಾಲಿವುಡ್ ಹಾಗೂ ಹಾಲಿವುಡ್'ನಲ್ಲಿ ಮಿಂಚುತ್ತಿರುವ ಮಂಗಳೂರಿನ ಚೆಲುವೆ ದೀಪಿಕಾ ಪಡುಕೋಣೆ ಕೂಡ ಕೆಲ ದಿನಗಳ ಹಿಂದೆ ತಿರುಮಲ ಆರ್ಶೀವಾದ ಪಡೆದಿದ್ದರು. ಪದ್ಮಾವತಿ ಸಿನಿಮಾ ರಿಲೀಸ್ ಆಗಲಿ ಯಶಸ್ಸು ಕಾಣಲೆಂದು ದೀಪಿಕಾ ಪಡುಕೋಣೆ ತಿರುಪತಿಗೆ ತೆರಳಿ, ತಿರುಮಲ ವೆಂಕಟೇಶ್ವರ ದೇವಾಲಯಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇನ್ನು ಸ್ಯಾಂಡಲ್'ವುಡ್ ಹೈ ಪ್ರೊಪೈಲ್ ಹೀರೋ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ, ಕೆಲ ತಿಂಗಳ ಹಿಂದೆಯಷ್ಟೇ ವೆಂಕಟೇಶ್ವರನ ದರ್ಶನ ಪಡೆದಿದ್ದರು. ರಾಜಕುಮಾರ ಸಿನಿಮಾ ರಿಲೀಸ್ ಟೈಮಲ್ಲಿ ಪವರ್ ಸ್ಟಾರ್ ಪತ್ನಿ ಅಶ್ವಿನಿ ಕೂಡ ತಿರುಮಲನಿಗೆ ಪೂಜೆ ಸಲ್ಲಿಸಿದ್ದರು. ಅದರಂತೆ ಸಿನಿಮಾನೂ ಯಶಸ್ಸು ಕಂಡಿತ್ತು. ಒಟ್ಟಿನಲ್ಲಿ ಸಿನಿಮಾ ತಾರೆಯರಿಗೂ ತಿರುಪತಿ ತಿಮ್ಮಪ್ಪನ ಮೇಲೆ ನಂಬಿಕೆ ಜಾಸ್ತಿ ಆಗಿರೋದಂತೂ ನಿಜ.