ಟೈರ್ ಸ್ಫೋಟ: ಅಪಘಾತದಲ್ಲಿ ಅಪ್ಪು ಪಾರು

news | Thursday, June 7th, 2018
Suvarna Web Desk
Highlights

ಖಾಸಗಿ ಕಾರ್ಯಕ್ರಮದ ನಿಮಿತ್ತ ಇಂದು ರಾತ್ರಿ 9.30ರ ಸಮಯದಲ್ಲಿ  ಅನಂತಪುರದಿಂದ ಬೆಂಗಳೂರಿಗೆ  ತಮ್ಮ ಸ್ನೇಹಿತರ ಕಾರು KA 05 MW 144 ನಲ್ಲಿ ಬರುತ್ತಿದ್ದಾಗ  ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿದೆ. 

ಅನಂತಪುರ[ಜೂ.07]: ಆಂಧ್ರ ಪ್ರದೇಶದ ಅನಂತಪುರ್ ಬಳಿ ಕನ್ನಡದ ಖ್ಯಾತ ನಟ ಪುನೀತ್ ರಾಜ್'ಕುಮಾರ್ ಅವರು ಪ್ರಯಾಣಿಸುತ್ತಿದ್ದ ರೇಂಜ್ ರೋವರ್  ಕಾರು ಅಪಘಾತವಾಗಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಪವನ್ ಒಡೆಯರ್ ನಿರ್ದೇಶನದ  ನಟ ಸಾರ್ವಭೌಮ ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಇಂದು ರಾತ್ರಿ 9.30ರ ಸಮಯದಲ್ಲಿ  ಅನಂತಪುರದಿಂದ ಬೆಂಗಳೂರಿಗೆ KA 05 MW 144 ಕಾರಿನಲ್ಲಿ ಬರುತ್ತಿದ್ದಾಗ  ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿದೆ. ಅದೃಷ್ಟವಶಾತ್ ಪುನಿತ್ ಅವರಿಗೆ ಯಾವುದೆ ಅಪಾಯವಾಗದೆ ಪಾರಾಗಿದ್ದಾರೆ.  ರಸ್ತೆ ಕಾಮಗಾರಿ ಹಿನ್ನಲೆಯಲ್ಲಿ ಅಪಘಾತ ಸಂಭವಿಸಿದೆ. 

"

Comments 0
Add Comment

    ಮಾಮಾ ಎಂದಾಕ್ಷಣ ನಮಗಿರುವ ಭಾವನೆಯೇ ಬೇರೆ, ನಿಜವಾದ ಅರ್ಥ?

    entertainment | Friday, May 11th, 2018
    Chethan Kumar
    3:00