ಬಾಡಿಗೆ ಬಾಕಿ ಉಳಿಸಿಕೊಂಡ ಕಾರಣಕ್ಕೆ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್‌'ಗೆ ಪ್ಯಾರಿಸ್‌'ನ ಅಪಾರ್ಟ್‌ಮೆಂಟ್ ತೆರವುಗೊಳಿಸುವಂತೆ ಕೋರ್ಟ್ ಆದೇಶಿಸಿದೆ.

ಪ್ಯಾರಿಸ್ (ಜ.10): ಬಾಡಿಗೆ ಬಾಕಿ ಉಳಿಸಿಕೊಂಡ ಕಾರಣಕ್ಕೆ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್‌'ಗೆ ಪ್ಯಾರಿಸ್‌'ನ ಅಪಾರ್ಟ್‌ಮೆಂಟ್ ತೆರವುಗೊಳಿಸುವಂತೆ ಕೋರ್ಟ್ ಆದೇಶಿಸಿದೆ.

2017 ಜ.1 ರಂದು 4.59 ಲಕ್ಷ ರೂ. ಮಾಸಿಕ ಹಣಕ್ಕೆ ಅಪಾರ್ಟ್‌ಮೆಂಟ್ ಅನ್ನು ಶೆರಾವತ್ ಮತ್ತು ಪತಿ ಸೈಕ್ರಿಲ್ಲೆ ಆಕ್ಸೆಾನ್ಸ್ ಬಾಡಿಗೆ ಪಡೆದಿದ್ದರು. 60 ಲಕ್ಷ ರೂ. ಪಾವತಿಸುವಂತೆ ಡಿ.14 ರಂದು ಕೋರ್ಟ್ ಸೂಚಿಸಿತ್ತು. ಅಲ್ಲದೆ ಬಾಕಿ ಹಣಕ್ಕೆ ಬದಲಾಗಿ ಮನೆಯ ಪೀಠೋಪಕರಣ ಜಪ್ತಿಗೆ ಸೂಚಿಸಿದೆ.