ಬಾಲಿವುಡ್ ನಟಿ ಕೃತಿಕಾ ಚೌಧರಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. 30 ವರ್ಷದ ಕೃತಿಕಾ ಅವರ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದು, 3-4 ದಿನಗಳ ಹಿಂದೆಯೇ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ಮುಂಬೈ(ಜೂ.13): ಬಾಲಿವುಡ್ ನಟಿ ಕೃತಿಕಾ ಚೌಧರಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. 30 ವರ್ಷದ ಕೃತಿಕಾ ಅವರ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದು, 3-4 ದಿನಗಳ ಹಿಂದೆಯೇ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ಮೊದಲಿಗೆ ಪೊಲೀಸರು ಆಕಸ್ಮಿಕ ಸಾವು ಅಂತಾ ಪ್ರಕರಣ ದಾಖಲಿಸಿದ್ದರು. ಆದ್ರೆ ತನಿಖೆಯಲ್ಲಿ ಶಂಕೆ ವ್ಯಕ್ತವಾಗಿದ್ದು ಇದೊಂದು ಹತ್ಯೆ ಅಂತ ಪೊಲಿಸರು ಶಂಕಿಸಿದ್ದಾರೆ. ಹರಿದ್ವಾರ ಮೂಲದ ಕೃತಿಕಾ ಚೌಧರಿ ಮುಂಬೈನಲ್ಲಿ ನೆಲೆಸಿದ್ದರು.

ಹಲವು ಹಿಂದಿ ಸಿನಿಮಾ, ಸೀರಿಯಲ್‌ಗಳಲ್ಲಿ ನಟಿಸಿರುವ ಕೃತಿಕಾ, ರಾಜ್ಜೋ ಚಿತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.