ವೆಂಕಯ್ಯ ನಾಯ್ಡು ದೇಶದ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಬೆನ್ನಲ್ಲೇ ಸ್ಯಾಂಡಲ್​ವುಡ್ ನಟ ಜಗ್ಗೇಶ್ ವಿವಾದಾತ್ಮಕ ಟ್ವೀಟೊಂದನ್ನ ಮಾಡಿದ್ದಾರೆ.

ಬೆಂಗಳೂರು (ಆ.06): ವೆಂಕಯ್ಯ ನಾಯ್ಡು ದೇಶದ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಬೆನ್ನಲ್ಲೇ ಸ್ಯಾಂಡಲ್​ವುಡ್ ನಟ ಜಗ್ಗೇಶ್ ವಿವಾದಾತ್ಮಕ ಟ್ವೀಟೊಂದನ್ನ ಮಾಡಿದ್ದಾರೆ. ವೆಂಕಯ್ಯ ನಾಯ್ಡು ಅವರನ್ನು ಭಾಷಾ ಭಾವನೆಯಿಂದ ರಾಜ್ಯಸಭೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರಿಂದು ಅವರೇ ದೇಶಕ್ಕೆ ಉಪರಾಷ್ಟ್ರಪತಿಯಾಗಿದ್ದಾರೆ ಎಂದು ಹೇಳುತ್ತಾ ಬಾರದು ಬಪ್ಪುದು, ಬಪ್ಪುದು ತಪ್ಪದು, ಇದೇ ದೇವರ ಲೀಲೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು. ಜಗ್ಗೇಶ್ ಟ್ವೀಟ್​ಗೆ ಹಲವರು ವಿರೋಧ ವ್ಯಕ್ತಪಡಿಸಿದಾಗ ತಮ್ಮ ಟ್ವೀಟನ್ನು ಡಿಲೀಟ್ ಮಾಡಿದ್ದಾರೆ. ನಟ ಜಗ್ಗೇಶ್ ಟ್ವೀಟ್‌ಗೆ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನು ನವರಸ ನಾಯಕ ಜಗ್ಗೇಶ್ ಈಗ ಹುಚ್ಚಾ ವೆಂಕಟ್ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಫೈರಿಂಗ್ ಸ್ಟಾರ್ ಅಂತಲೇ ಕರೆಸಿಕೊಳ್ಳುವ ಹುಚ್ಚಾವೆಂಕಟ್, ಜಗ್ಗೇಶ್ ಅವರನ್ನ ಕಠುವಾಗಿಯೇ ಟೀಕಿಸಿದ್ದಾರೆ. ಇಷ್ಟೇ ಅಲ್ಲ, ಸಿನಿಮಾ ಮಾಡಿ ಇಲ್ಲವೇ ರಾಜಕೀಯ ಮಾಡಿ.ಆದರೆ, ಕನ್ನಡಿಗರನ್ನ ಅಪಮಾನ ಮಾಡಬೇಡಿ. ನೀವೂ ಕನ್ನಡಿಗರೇ ಅನ್ನೋದನ್ನ ಮರಿಬೇಡಿ ಅಂತಲೂ ಎಚ್ಚರಿಸಿದ್ದಾರೆ. ನೀರ್ ದೋಸೆ'ಯಂತ ಸಿನಿಮಾ ಮಾಡಿದ್ದೀರಿ. ಫ್ಯಾಮಿಲಿ ಕೂತು ನೋಡೋ ಚಿತ್ರವೇ ಇದೂ ಅಂತಲೂ ತಮ್ಮದೇ ದಾಟಿಯಲ್ಲಿ ಪ್ರಶ್ನೆ ಮಾಡಿದ್ದಾರೆ.